ಈ ಸೊಪ್ಪಿನಲ್ಲಿದೆ ಅಸ್ತಮಾ, ಹೊಟ್ಟೆಹುಣ್ಣು ಮುಂತಾದ ಸಮಸ್ಯೆಗಳನ್ನು ನಿವಾರಿಸುವ ಗುಣ..!

0
135

ಆಡುಸೋಗೆ ಗಿಡವು ಒಂದು ಆಯುರ್ವೇದ ಔಷಧೀಯ ಸಸ್ಯವಾಗಿದೆ. ಇದನ್ನು ಸಂಸ್ಕೃತದಲ್ಲಿ “ವಸಕ”, “ಶ್ವೆತವಾಸ” ಇಂಗ್ಲೀಷಿನಲ್ಲಿ “ಮಲಬಾರ ನಟ್” ಎಂದೂ ಕರೆಯುತ್ತಾರೆ.  ಬೇರಿನಿಂದ ಹಿಡಿದು ಸಸ್ಯದ ಸಂಪೂರ್ಣ ಭಾಗವೂ ಅನೇಕ ರೋಗಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಇದು ಅಸ್ತಮಾ, ಬ್ರಾಂಕೈಟಿಸ್, ಕ್ಷಯ ಮತ್ತು ಅಸ್ವಸ್ಥತೆಯ ಚಿಕಿತ್ಸೆಗಳಿಗೆ ಪರಿಣಾಮಕಾರಿಯಾಗಿದೆ.  ಈ ಸಸ್ಯವನ್ನು ಆಯುರ್ವೇದ, ಯುನಾನಿ, ಹೋಮಿಯೋಪತಿ ಮತ್ತು ಇತರ ಪುರಾತನ ವೈದ್ಯಕೀಯ ಚಿಕಿತ್ಸೆಗಳಲ್ಲಿ ಬಳಸಲಾಗುತ್ತದೆ.

ಇದು ಪ್ರಮುಖ ಔಷಧೀಯಮುಲಿಕೆಗಳಲ್ಲಿ ಒಂದಾಗಿದ್ದು, ಎಲೆ, ಹೂವು, ಬೇರು, ಮತ್ತು ಇಡೀ ಸಸ್ಯವನ್ನು ಅನೇಕ ಔಷಧ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಗಿಡವು ಚಿಕ್ಕದಾಗಿ ಪೊದೆಯಂತೆ ಬೆಳೆಯುತ್ತದೆ. ಸದಾ ಹಸಿರಾಗಿದ್ದು, ಸುಂದರ ಹೂವುಗಳನ್ನು ಬಿಡುತ್ತದೆ. ಈ ಸಸ್ಯವು ಭಾರತದಾದ್ಯಂತ ನೋಡಲು ಸಿಗುತ್ತದೆ.

ಆಡುಸೋಗೆಯ ಆರೋಗ್ಯ ಪ್ರಯೋಜನಗಳು

Aadusoge - ಈ ಸೊಪ್ಪಿನಲ್ಲಿದೆ ಅಸ್ತಮಾ, ಹೊಟ್ಟೆಹುಣ್ಣು ಮುಂತಾದ ಸಮಸ್ಯೆಗಳನ್ನು ನಿವಾರಿಸುವ ಗುಣ..!
ಆಡುಸೋಗೆ ಗಿಡ

ಉಸಿರಾರಾಟದ ಸಮಸ್ಯೆಗೆ

ಕೆಮ್ಮು, ಬ್ರಾಂಕೈಟಿಸ್, ಅಸ್ತಮಾ ಮುಂತಾದ ಉಸಿರಾಟದ ಸಮಸ್ಯೆಗಳ ನಿವಾರಣೆಗೆ ಇದು ಪರಿಣಾಮಕಾರಿಯಾದ ಮೂಲಿಕೆಯಾಗಿದೆ. ಇದು ಶ್ವಾಸನಾಳದ ಸಮಸ್ಯೆಗಳಿಗೆ ಉತ್ತಮ ಪರಿಣಾಮವನ್ನು ಬೀರುತ್ತದೆ. ಅಸ್ತಮಾ ಇರುವವರು ಆಡುಸೋಗೆ ಸೊಪ್ಪಿನ ರಸ, ಶುಂಟಿ ರಸ ಮತ್ತು ಜೇನುತುಪ್ಪ ಸೇರಿಸಿ ತೆಗೆದುಕೊಳ್ಳುವುದರಿಂದ ನಿವಾರಣೆಯಾಗುತ್ತದೆ.

ಕ್ಷಯರೋಗ ನಿವಾರಕ

ಆಡುಸೋಗೆಯು ಸುಕ್ಷ್ಮಾಣುಜೀವಿ ನಿರೋಧಕ ಗುಣಗಳಿಗೆ ಹೆಸರುವಾಸಿಯಾಗಿದೆ. ಇದರಿಂದಾಗಿ ಕ್ಷಯ ರೋಗದ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ.

ಮುತ್ರಾಶಯ ಸಮಸ್ಯೆ ನಿವಾರಕ

ಮುತ್ರಾಶಯ ಸೋಂಕುಗಳಿಗೆ ಇದು ರಾಮಬಾಣವಿದ್ದಂ. ಹಿಂದೆಲ್ಲ ಈ ಸೊಪ್ಪಿನ ರಸ ಮತ್ತು ಅದೇ ಪ್ರಮಾಣದ ಜೇನುತುಪ್ಪ ಸೇರಿಸಿ ಸೇವಿಸುತ್ತಿದ್ದರು. ಕಿಬ್ಬೊಟ್ಟೆ ನೋವುಗಳಿಗೆ ಬೇವಿನ ಸೊಪ್ಪು ಮತ್ತು ಆಡುಸೋಗೆ ಸೊಪ್ಪನ್ನು ಅಲ್ಲಿ ಕಟ್ಟುವುದು ಅಥವಾ ಅದರ ಶಾಖ ಕೊಡುವುದರ ಮೂಲಕ ನಿವಾರಿಸಿಕೊಳ್ಳುತ್ತಿದ್ದರು.

ಚರ್ಮ ರೋಗ ನಿವಾರಕ

ಇದು ಪರಿಣಾಮಕಾರಿಯಾದ ಸೋಂಕು ನಿವಾರಕವಾಗಿದೆ. ಇದರಿಂದಾಗಿ ಹುಳಕಡ್ಡಿ, ತುರಿಕೆಯಂತಹ ಚರ್ಮರೋಗಗಳಿಗೆ ಔಷಧವಾಗಿ ಬಳಕೆ ಮಾಡಲಾಗುತ್ತದೆ. ಕೆಲವು ಆಡುಸೋಗೆ ಎಲೆಗಳನ್ನು ತೆಗೆದುಕೊಂಡು ಅರಶಿನ ಮತ್ತು ಗೋಮೂತ್ರ ಸೇರಿಸಿ ಅರೆದು ಹಚ್ಚುವ ಮೂಲಕ ನಿವಾರಣೆ ಮಾಡಿಕೊಳ್ಳಬಹುದು.

ರಕ್ತಸ್ರಾವಗಳ ನಿವಾರಣೆ

Malabar nut - ಈ ಸೊಪ್ಪಿನಲ್ಲಿದೆ ಅಸ್ತಮಾ, ಹೊಟ್ಟೆಹುಣ್ಣು ಮುಂತಾದ ಸಮಸ್ಯೆಗಳನ್ನು ನಿವಾರಿಸುವ ಗುಣ..!

ಕೆಲವರಿಗೆ ಕಿವಿ, ಮೂಗು, ಕಣ್ಣು, ಮಲದ್ವಾರಗಳಿಂದ ಅಲ್ಲದೇ ಜಠರ ಮತ್ತು ಕರುಳುಗಳಲ್ಲಿಯೂ ರಕ್ತಸ್ರಾವವಾಗುತ್ತದೆ. ಇದರ ಚಿಕಿತ್ಸೆಗೆ ಆಡುಸೋಗೆ ಸೊಪ್ಪು ತುಂಬಾ ಪರಿಣಾಮಕಾರಿಯಾಗಿದೆ. ಸುಮಾರು 15 ಗ್ರಾಂ ಸೊಪ್ಪಿನ ರಸಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಎರಡು ಬಾರಿಯಂತೆ ನಾಲ್ಕುದಿನ ತೆಗೆದುಕೊಳ್ಳುವುದರಿಂದ ಕಡಿಮೆ ಮಾಡಿಕೊಳ್ಳಬಹುದು.

ಆಡುಸೋಗೆಯ ಅಡ್ಡ ಪರಿಣಾಮಗಳು

  • ಇದು ಉಷ್ಣಕಾರಕ ಗುಣವನ್ನು ಹೊಂದಿದೆ. ಇದರ ಅತಿಯಾದ ಬಳಕೆಯಿಂದ ದೇಹಕ್ಕೆ ಉಷ್ಣತೆಯ ತೊಂದರೆಗಳು ಉಂಟಾಗಬಹುದು.
  • ಚಿಕ್ಕ ಮಕ್ಕಳಿಗೆ ಇದನ್ನು ನೀಡುವಾಗ ಅನುಭವಿಗಳ ಸಲಹೆ ತೆಗೆದುಕೊಳ್ಳುವುದು ಉತ್ತಮ.
  • ಗರ್ಭಿಣಿಯರು ಇದರ ಸೇವನೆಯನ್ನು ಮಾಡದಿರುವುದು ಉತ್ತಮ.
  • ಇದು ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ ಹಾಗಾಗಿ ಮದುಮೇಹಿಗಳು ಎಚ್ಚರಿಕೆ ವಹಿಸುವುದು ಅವಶ್ಯವಾಗಿದೆ.

Image Copyright : google.com

LEAVE A REPLY

Please enter your comment!
Please enter your name here