ಲಾಡೆನ್ ಪುತ್ರ ಹಮ್ಜಾಬಿನ್ ನ್ನು ಹೊಡೆದುರುಳಿಸಿದ ಅಮೇರಿಕಾ ಸೇನೆ

0
41
trump-confirms-death-of-osama-bin-ladens-son
Image Credit: News 18.com

ಆಲ್ ಖೈದಾ ಉಗ್ರ ಸಂಘಟನೆಯ ಉತ್ತರಾಧಿಕಾರಿ ಲಾಡೆನ್ ಪುತ್ರ ಹಮ್ಜಾಬಿನ್ ಲಾಡೆನ್ ನನ್ನು ಅಮೇರಿಕಾ ಸೇನೆ ಹೊಡೆದುರುಳಿಸಿರುವ ಸುದ್ದಿಯನ್ನು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಚಿತಪಡಿಸಿದ್ದಾರೆ. ಶನಿವಾರ ಬಿಡುಗಡೆ ಮಾಡಿರುವ ಶ್ವೇತ ಭವನದ ಪ್ರಕಟಣೆಯಲ್ಲಿ ಟ್ರಂಪ್ ತಿಳಿಸಿದ್ದಾರೆ.

ಆಫ್ಗಾನಿಸ್ತಾನ್-ಪಾಕಿಸ್ತಾನ್ ಗಾಡಿಯಲ್ಲಿನ ಭಯೋತ್ಪಾದಕ ನಿರ್ಮೂಲನಾ ಸೇನೆಯ ದಾಳಿಗೆ ಬಿನ್ಡೆನ್ ಮೂರನೆಯ ಹೆಂಡತಿಯ ಪುತ್ರ, ಆಲ್ ಖೈದಾ ಉಗ್ರ ಸಂಘಟನೆಯ ಉತ್ತರಾಧಿಕಾರಿ ಹಮ್ಜಾಬಿನ್  ಬಲಿಯಾಗಿದ್ದಾನೆ. ಅಗಸ್ಟ್ ನಲ್ಲಿ  ಅಮೇರಿಕಾದ ಮಾಧ್ಯಮಗಳು ಈ ವರದಿಯನ್ನು ಬಹಿರಂಗ ಪಡಿಸಿದ್ದವು. ಆದರೆ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಬಂದಿರಲಿಲ್ಲ.

ಇದನ್ನೂ ಓದಿರಿ: ಭಾರತದೊಂದಿಗೆ ಯುದ್ಧವಾದರೆ ಪಾಕಿಸ್ತಾನ ಸೋಲುವುದು ಖಚಿತ ಎಂದ ಇಮ್ರಾನ್ ಖಾನ್..!

ಬಿನ್ ಲಾಡೆನ್ ನ ಮೂರನೆಯ ಹೆಂಡತಿಯ ಮಗನಾಗಿರುವ ಈತ ಲಾಡೆನ್ ನ ನಂತರ ಆಲ್ ಖೈದಾ ಉಗ್ರ ಸಂಘಟನೆಯ ಉತ್ತರಾಧಿಕಾರಿ ಹುದ್ದೆಯನ್ನು ಅಲಂಕರಿಸಿದ್ದ. ಈತ ತುಂಬಾ ಕ್ರುರಿಯಾಗಿದ್ದು, ಅಮೇರಿಕಾದ ವಿರುದ್ಧ ಸೇಡು ತಿರಿಸಿಕೊಳ್ಳಲು ಹಾತೊರೆಯುತ್ತಿದ್ದ ಎಂದು ಹೇಳಲಾಗಿದೆ. ಅಲ್ಲದೇ ಈತನ ತಲೆಗೆ ಒಂದು ಮಿಲಿಯನ್ ಅಮೇರಿಕನ್ ಡಾಲರ್ ಬಹುಮಾನವನ್ನು ಘೋಷಣೆ ಮಾಡಲಾಗಿತ್ತು.

ಇದನ್ನೂ ಓದಿರಿ: ಪಾತಾಳಕ್ಕೆ ಕುಸಿದ ಪಾಕ್..!  ದಿವಾಳಿಯತ್ತ ಪಾಕ್ ನ ಆರ್ಥಿಕ ಸ್ಥಿತಿ..!

LEAVE A REPLY

Please enter your comment!
Please enter your name here