ನಡೆದಾಡುವ ದೇವರು ಈ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು..!

0
70

ಶ್ರೀ ಶಿವಕುಮಾರ ಮಹಾ ಸ್ವಾಮಿಗಳ ಜೀವನವೇ ಒಂದು ಸಾಧನೆ. ಇವರು ಮಾಡಿದ ಸಾಧನೆ ಒಂದೇ ಎರಡೇ, ಅವನ್ನು ಹೇಳುತ್ತಾ ಹೋದರೆ ಸಮಯ ಸಾಲದು.. ಬಡ ಮತ್ತು ಅನಾಥ ಮಕ್ಕಳಿಗೆ ಶಿಕ್ಷಣ, ಆಹಾರ ಮತ್ತು ವಸತಿಯನ್ನು ಕಲ್ಪಿಸಿದ ಮಹಾನ್ ಸಾಧಕ..! ಹೌದು.. ಇವರು ಮಕ್ಕಳಿಗೆ ಶಿಕ್ಷಣ ದೊರಕಿಸಿಕೊಡುವ ಸಲುವಾಗಿ  128 ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ್ದಾರೆ. ಪ್ರತಿದಿನ 15 ಸಾವಿರಕ್ಕೂ ಅಧಿಕ ಮಕ್ಕಳಿಗೆ ಏಕಕಾಲದಲ್ಲಿ ವಸತಿ, ಶಿಕ್ಷಣ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಇವರ ಅಗಲಿಕೆಯು ದೇಶಕ್ಕೆ ಮತ್ತು ಕನ್ನಡಿಗರಿಗೆ ತುಂಬಲಾರದ ನಷ್ಟ ಉಂಟಾಗಿದೆ.   

ಶ್ರೀಗಳ ಪುರ್ವಾಶ್ರಮ ಹೇಗಿತ್ತು..?

Modi shri - ನಡೆದಾಡುವ ದೇವರು ಈ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು..!

ಮಾಗಡಿ ತಾಲೂಕಿನ ವೀರಾಪುರದಲ್ಲಿ  ಹೊನ್ನೇಗೌಡ ಮತ್ತು ವೀರಮ್ಮರ 13 ನೇಯ ಮಗನಾಗಿ ಎಪ್ರಿಲ್ 7, 1907 ರಲ್ಲಿ ಜನಿಸಿದರು. ಚಿಕ್ಕಂದಿನಿಂದಲೂ ಕಲಿಕೆಯಲ್ಲಿ ಚುರುಕಾಗಿದ್ದ ಶಿವಣ್ಣ, 1922 ರ ಹೊತ್ತಿಗೆ ಮಾಧ್ಯಮಿಕ ಶಿಕ್ಷಣವನ್ನು ಮುಗಿಸಿದ್ದರು. ಇಷ್ತೋತ್ತಿಗಾಗಲೇ ತಮ್ಮ ತಾಯಿಯನ್ನು ಕಳೆದುಕೊಂದಿದ್ದರು. 1926 ರಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿ, ಬೆಂಗಳೂರಿನ ಸೆಂಟ್ರಲ್ ಕಾಲೇಜಿಗೆ ಆಯ್ಕೆಯಾದರು. ಈ ನಡುವೆ ಸಿದ್ದಗಂಗಾ ಮಠಕ್ಕೆ ಹೋಗಿ ಬಂದು ನಡೆದೇ ಇತ್ತು. ಆಗಿನ ಪಿಠಾಧಿಪತಿಗಳಾಗ ಶ್ರೀ ಉದ್ದಾನ ಶಿವಯೋಗಿಗಳ ಜೊತೆಯಲ್ಲಿ ವಿಶೇಷ ಒಡನಾಟ ಹೊಂದಿದವರಾಗಿದ್ದರು. ಶಿವಣ್ಣನವರಿಗೆ ಶ್ರೀ ಉದ್ದಾನ ಶಿವಯೋಗಿಗಳ ಮತ್ತು ಕಿರಿಯ ಸ್ವಾಮೀಜಿಗಳಾದ ಮರುಳಾರಾಧ್ಯರ ಜೊತೆಯಲ್ಲಿ ಚರ್ಚೆ ನಡೆಸುವುದು ಮತ್ತು ಮಠದ ಕಾರ್ಯಗಳಲ್ಲಿ ಭಾಗವಹಿಸುವುದು ಹಿತವಾದ ಅನುಭವವನ್ನು ಉಂಟುಮಾಡುತ್ತಿತ್ತು.

Siddaganga seer Shivakumara Swami children 1548058376 - ನಡೆದಾಡುವ ದೇವರು ಈ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು..!

ಉತ್ತಮವಾಗಿ ನಡೆದುಕೊಂಡು ಬರುತ್ತಿದ್ದ ಮಠವು ಇದ್ದಕ್ಕಿದ್ದಂತೆ ಕಿರಿಯ ಸ್ವಾಮಿಗಳನ್ನು ಕಳೆದುಕೊಂಡು ಅನಾಥವಾಯಿತು. ಅವರ ಕ್ರಿಯಾಸಮಾಧಿಗೆ ಸಾರ್ವಜನಿಕರಂತೆ ಬಂದಿದ್ದ ಶಿವಣ್ಣನವರನ್ನು ಶ್ರೀ ಉದ್ದಾನ ಶಿವಯೋಗಿಗಳು ಎಲ್ಲರ ಸಮ್ಮುಖದಲ್ಲಿಯೇ ಮುಂದಿನ ಸ್ವಾಮೀಜಿಯನ್ನಾಗಿ ಘೋಷಿಸಿಯೇ ಬಿಟ್ಟರು.  ಸಮಾಧಿ ಕಾರ್ಯಕ್ಕೆ ಬರುವಾಗ ಶಿವಣ್ಣನಾಗಿ ಬಂದವರು ಹೋಗುವಾಗ ಕಾವಿ,ರುದ್ರಾಕ್ಷಿಗಳೊಂದಿಗೆ ಶಿವಕುಮಾರ ಸ್ವಾಮಿಗಳಾಗಿ ವಾಪಸಾದರು. ಸನ್ಯಾಸತ್ವದ ರೀತಿ, ರಿವಾಜುಗಳನ್ನು ಅನುಸರಿಸುತ್ತ ವಿದ್ಯಾಭ್ಯಾಸ ಮುಂದುವರೆಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ  ಶ್ರೀ ಮಠಕ್ಕೆ ವಾಪಸಾದರು.

ಮಠಾಧಿಕಾರವನ್ನು ಪಡೆದ ನಂತರದ ಪರಿಸ್ಥಿತಿಗಳು  

siddaganga - ನಡೆದಾಡುವ ದೇವರು ಈ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು..!

ಶ್ರೀಗಳು ಮಠಾಧಿಕಾರವನ್ನು ವಹಿಸಿಕೊಂಡ ಸಂದರ್ಭದಲ್ಲಿ ಮಠದ ಆದಾಯವು ತುಂಬಾ ಕಡಿಮೆ ಇತ್ತು. ಮಠಕ್ಕೆ ಮೀಸಲಾಗಿದ್ದ ಜಮೀನಿನಲ್ಲಿ ಬೆಳೆಗಳನ್ನು ಬೆಳೆದು ವಿದ್ಯಾರ್ಥಿಗಳ ಕರ್ಚುವೆಚ್ಚ ನಿಭಾಯಿಸುವುದು ಕಷ್ಟದಾಯಕವಾಗಿತ್ತು. ಕೇವಲ ಮಳೆಯಾಶ್ರಿತವಾಗಿದ್ದರಿಂದ ಅತಿವೃಷ್ಟಿ ಅನಾವೃಷ್ಟಿಗಳಿಗೆ ಸಿಲುಕಿ ತೊಂದರೆ ಉಂಟಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಶ್ರೀಗಳು ಭಕ್ತಾದಿಗಳು ಕರೆದಲ್ಲಿಗೆ ನಡೆದುಕೊಂಡೇ ಹೋಗಿ ಪಾದಪುಜೆಗಳನ್ನು ನಡೆಸಿಕೊಟ್ಟು, ದವಸ ಧಾನ್ಯಗಳನ್ನು ತರುತ್ತಿದ್ದರು.

ಶ್ರೀಗಳಿಂದ ಇವೆಲ್ಲವುಗಳನ್ನು ನಿಭಾಯಿಸಲು ಸಾಧ್ಯವಿಲ್ಲವೆಂಬ ಕೂಗು ಕೇಳಿಬಂದರೂ, ಹಿಂಜರಿಯದೇ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ, ದಿನನಿತ್ಯ ಮಠದಲ್ಲಿ ನಡೆಯಬೇಕಾದ ಧಾರ್ಮಿಕ ಕಾರ್ಯಗಳು, ಮಠಕ್ಕೆ ಭಕ್ತರು ಹಾಗೂ ಗಣ್ಯರ ಬೇಟಿ, ಮಠದ ಆರ್ಥಿಕ ನಿರ್ವಹಣೆ ಸೇರಿದಂತೆ ಎಲ್ಲ ಕಾರ್ಯಗಳನ್ನು ನಿಭಾಯಿಸಿ ಸೈ ಎನಿಸಿಕೊಂಡರು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣದ ಪ್ರಾಮುಖ್ಯತೆಯನ್ನು ತಿಳಿಸಿ, ವಿದ್ಯಾರ್ಥಿಗಳಿಗೆ ಸುಲಭವಾಗಿ ಲಭಿಸುವಂತೆ ನೋಡಿಕೊಂಡರು. ಅವರ ಈ ಕಾರ್ಯವು ಸ್ವತಂತ್ರ ಭಾರತದಲ್ಲಿ ತುಂಬಾ ಶ್ಲಾಘನೆಗೆ ಒಳಗಾಗಿ ಸಿದ್ಧಗಂಗಾ ಕ್ಷೇತ್ರವು ಪ್ರಸಿದ್ಧಿಯನ್ನು ಪಡೆಯಿತು.

Yadiyurappa shri siddaraamayya - ನಡೆದಾಡುವ ದೇವರು ಈ ಶ್ರೀ ಶಿವಕುಮಾರ ಮಹಾ ಸ್ವಾಮಿಗಳು..!

Image Copyright: google.com

LEAVE A REPLY

Please enter your comment!
Please enter your name here