ರಾಜನಾಥ ಸಿಂಗ್ ಅವರ ರಫೇಲ್ ಪೂಜೆ ಬರೀ ನಾಟಕ ಎಂದ ಮಲ್ಲಿಕಾರ್ಜುನ್ ಖರ್ಗೆ

0
59
tamasha-mallikarjun-kharge-mocks-rajnaths-shastra-puja

ವಿಜಯದಶಮಿಯ ದಿನ ಫ್ರಾನ್ಸ್ ಸರಕಾರ ಮೊದಲ ರಫೇಲ್ ಯುದ್ಧ ವಿಮಾನವನ್ನು ರಾಜನಾಥ ಸಿಂಗ್ ಅವರಿಗೆ ಹಸ್ತಾಂತರಿಸಿತು. ಆಯುಧ ಪೂಜೆಯ ದಿನವಾದ್ದರಿಂದ ಹಸ್ತಾಂತರದ ನಂತರ ರಕ್ಷಣಾ ಸಚಿವರು ವಿಮಾನಕ್ಕೆ ಶಾಸ್ತ್ರೋಕ್ತವಾಗಿ ಪೂಜೆಯನ್ನು ಸಲ್ಲಿಸಿದರು.

ಈಗ ವಿಮಾನಕ್ಕೆ ಪೂಜೆಯನ್ನು ಸಲ್ಲಿಸಿದ್ದು ಕಾಂಗ್ರೆಸ್ ನ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಈ ಕುರಿತಂತೆ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆ, ಬೋಪೋರ್ಸ್ ನಂತಹ ಶಸ್ತ್ರಾಸ್ತ್ರಗಳನ್ನು ಖರೀದಿಸಿದಾಗ ಅವುಗಳನ್ನು ತರಲು ಮತ್ತು ಪ್ರಚಾರ ಗಿಟ್ಟಿಸಿಕೊಳ್ಳುಲು ಯಾರೂ ಹೋಗಿರಲಿಲ್ಲ. ಆದರೆ ರಾಜನಾಥ ಸಿಂಗ್ ಅವರು ವಿಮಾನಕ್ಕೆ ಪೂಜೆ ಮಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುಲು ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿರಿ: ವಿಜಯದಶಮಿಯಂದೇ ಭಾರತಕ್ಕೆ ಸಿಕ್ತು ರಫೇಲ್ ಎಂಬ ಬ್ರಹ್ಮಾಸ್ತ್ರ..!

tamasha-mallikarjun-kharge-mocks-rajnaths-shastra-puja
Image Credit: google.com

ಈ ಕುರಿತು ಅಮಿತ್ ಷಾ ಹೇಳಿದ್ದೇನು?

ಆಯುಧ ಪೂಜೆಯ ದಿನ ವಿಮಾನ ಪೂಜಿಸಿದ ವಿಚಾರಕ್ಕೆ ವಿರೋದ ವ್ಯಕ್ತಪಡಿಸಿದ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ಪ್ರತಿಯಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮಾತನಾಡಿ ಕಾಂಗೆಸ್ ಭಾರತೀಯ ಸಂಪ್ರದಾಯವನ್ನು ಪರಿಹಾಸ್ಯ ಮಾಡುತ್ತಿದೆ. ಆಯುಧ ಪೂಜೆಯನ್ನು ಮಾಡುವುದು ಕಾಂಗ್ರೆಸ್ ಗೆ ಇಷ್ಟವಿಲ್ಲವೆಂದು ಕಾಣುತ್ತದೆ. ಭಾರತೀಯ ಸಂಪ್ರದಾಯದ ಕುರಿತು ಬೇಜವಾಬ್ದಾರಿಯುತ ಹೇಳಿಕೆಗಳು ಸರಿಯಲ್ಲ. ಕಾಂಗ್ರೆಸ್ ಭಾರತೀಯ ಆಚರಣೆಗಳ ಕುರಿತು ತನ್ನ ನಿಲುವನ್ನು ಸ್ಪಷ್ಟ ಪಡಿಸಬೇಕೆಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here