2019 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

0
5553

ಬೆಂಗಳೂರು : ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ 2018- 19 ಸಾಲಿನ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿದೆ. ಲೋಖಸಭಾ ಚುನಾವಣೆ ಸಮೀಪಿಸಿರುವ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ಬೇಗ ನಡೆಸಲು ಮುಂದಾಗಿದ್ದು, ಮಾರ್ಚ್ 21 ರಿಂದ ಎಪ್ರಿಲ್ 04 ರವರೆಗೆ  ನಡೆಸಲು ಮುಂದಾಗಿದೆ.

ಇದನ್ನೂ ಓದಿರಿ : ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ

 

ಚುನಾವಣೆಯ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಮೊದಲಿಗೆ ಪರೀಕ್ಷೆ ನಡೆಸಿಕೊಳ್ಳಲು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ  ಮುಂದಾಗಿದ್ದು, ಎಪ್ರಿಲ್ ಮೊದಲ ವಾರದಲ್ಲಿ ಎಲ್ಲಾ ಪರೀಕ್ಷೆಗಳನ್ನು ಮುಗಿಸಿಕೊಳ್ಳಲಿದೆ.  ಇಂದು ಪ್ರಕಟವಾದ ವೇಳಾಪಟ್ಟಿ ಕೆಳಕಂಡಂತಿದೆ.

  • ಮಾರ್ಚ್ 21 : ಪ್ರಥಮ ಭಾಷೆ ( ಕನ್ನಡ, ತಮಿಳು, ತೆಲಗು, ಹಿಂದಿ, ಮರಾಠಿ, ಸಂಸ್ಕೃತ, ಇಂಗ್ಲಿಷ್ ಇತರೆ.)
  • ಮಾರ್ಚ್ 22 : ಅರ್ಥಶಾಸ್ತ್ರ, ಎಲಿಮೆಂಟ್ ಆಫ್ ಕಂಪ್ಯೂಟರ್ ಸೈನ್ಸ್, ಎಲಿಮೆಂಟ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರ್,  ಎಲಿಮೆಂಟ್ ಆಫ್ ಮೆಕಾನಿಕಲ್ ಎಲೆಕ್ಟ್ರಿಕಲ್, ಎಂಜಿನಿಯರಿಂಗ್ -2    ಎಂಜಿನಿಯರಿಂಗ್ ಗ್ರಾಫಿಕ್ಸ್ -2.
  • ಮಾರ್ಚ್ 25 : ಗಣೀತ, ಸಮಾಜಶಾಸ್ತ್ರ.
  • ಮಾರ್ಚ್ 27 : ದ್ವಿತೀಯ ಭಾಷೆ ( ಕನ್ನಡ, ಇಂಗ್ಲಿಷ್ ಇತರೆ.)
  •  ಮಾರ್ಚ್ 29 : ಸಮಾಜ ವಿಜ್ಞಾನ
  • ಎಪ್ರಿಲ್ 2 : ವಿಜ್ಞಾನ, ರಾಜ್ಯಶಾಸ್ತ್ರ
  • ಎಪ್ರಿಲ್ 4 : ತ್ರತೀಯ ಭಾಷೆ  (ಸಂಸ್ಕೃತ, ಹಿಂದಿ, ಇಂಗ್ಲಿಷ್ ಇತರೆ.)

 

Image Copyright : google.com
SPONSORED CONTENT

LEAVE A REPLY

Please enter your comment!
Please enter your name here