ಹಿರಿಯ ನಟ ಲೋಕನಾಥ ವಿಧಿವಶ..!

0
76

ಹಿರಿಯ ನಟ ಲೋಕನಾಥ (90) ಅವರು ವಯೋ ಸಹಜ ಕಾಯಿಲೆಗಳಿಂದ ರವಿವಾರ ಮಧ್ಯರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಪುಟ್ಟಣ್ಣ ಕಣಗಾಲ್ ಅವರ ನಾಗರಹಾವು ಚಿತ್ರದ ಪ್ರಿನ್ಸಿಪಾಲ್ ಶಾಮಯ್ಯ ಮೇಸ್ಟ್ರ ಪಾತ್ರದಲ್ಲಿ ಮಿಂಚಿದ್ದ ಅವರನ್ನು ಯಾರು ಮರೆಯಲು ಸಾಧ್ಯವಿಲ್ಲ. “ಗೆಜ್ಜೆಪೂಜೆ” ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಕಾಲಿಟ್ಟ ಇವರು
ಸಂಸ್ಕಾರ, ಮಾಲ್ಗುಡಿ ಡೇಸ್, ಮಿಂಚಿನ ಓಟ, ಬೂತಯ್ಯನ ಮಗ ಅಯ್ಯು, ನಾಗರಹಾವು ಸೇರಿದಂತೆ 1000 ಕ್ಕೂ ಅಧಿಕ ನಾಟಕ ಮತ್ತು ಚಲನ ಚಿತ್ರಗಳಲ್ಲಿ ಅಭಿನಯಿಸಿದ ಗೆಗ್ಗಳಿಕೆ ಇವರದು.

ಅಗಸ್ಟ್ 14, 1927 ರಂದು ಹನುಮಂತಪ್ಪ ಮತ್ತು ಗೌರಮ್ಮ ಅವರ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದ ಇವರು ಸ್ವಾತಂತ್ರ್ಯ ಹೋರಾಟಗಳನ್ನು ಸಹ ಕಣ್ಣಾರೆ ಕಂಡಂತಹ ಮಹಾನ್ ವ್ಯಕ್ತಿ. ಇವರು ಸ್ಟಾರ್ ನಟರು ಎನಿಸಿಕೊಂದಂತಹ ಡಾ. ರಾಜಕುಮಾರ್, ಡಾ. ವಿಷ್ಣುವರ್ಧನ್, ಅಂಬರೀಷ, ಅನಂತ್ ನಾಗ್, ಶಂಕರ್ ನಾಗ್, ಪ್ರಭಾಕರ್ರಂತಹ ಮೇರು ನಟರ ಜೊತೆಯಲ್ಲಿ ನಟಿಸಿ ಸೈ ಎನಿಸಿಕೊಂಡವರು.

ಇನ್ನು ಹಿರಿಯ ನಟ, ರಂಗಕರ್ಮಿ ಲೋಕನಾಥ್ ಅವರ ಅಗಲಿಕೆಯು ಚಿತ್ರರಂಗಕ್ಕೆ ತುಂಬಲಾರದಂತಹ ನಷ್ಟವನ್ನು ಉಂಟುಮಾಡಿದ್ದು, ಇವರ ನಿಧಾನಕ್ಕೆ ಚಿತ್ರರಂಗ, ನಿರ್ಮಾಪಕರು, ನಿರ್ದೇಶಕರು, ಕಲಾವಿಧರು, ತಂತ್ರಜ್ಞರು, ರಾಜಕಾರಣಿಗಳು ಮತ್ತು ಮಹಾನ್ ವ್ಯಕ್ತಿಗಳು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಇದನ್ನೂ ಓದಿರಿ : ನಟಿ ತಾಪ್ಸಿಗೆ ದೇಹದ ಈ ಭಾಗ ತುಂಬಾ ಇಷ್ಟವಂತೆ..!

Image Copyright : google.com

LEAVE A REPLY

Please enter your comment!
Please enter your name here