ಭಾರತೀಯ ಸೇನೆ ಈಗ ಹಿಂದೆಂದಿಗಿಂತಲೂ ಬಲಿಷ್ಟವಾಗಲಿದೆ…! ಇದಕ್ಕೆ ಕಾರಣವೇನು..?

0
117

ಇಡೀ ದೇಶವೇ ಇಂದು ಸೇನೆಯ ಸಾಹಸವನ್ನು ಕಂಡು ನಿಬ್ಬೆರಗಾಗಿದೆ. ದೇಶದ ಜನತೆ ಬಯಸಿದ ಪ್ರತಿಕಾರದ ದಾಳಿಯನ್ನು ಯಶಸ್ವಿಯಾಗಿ ಮಾಡಿ ಮುಗಿಸುವ ಮೂಲಕ ಜನತೆಯ ಮನದಲ್ಲಿ ಹಿಂದೆಂದಿಗಿಂತಲೂ ಬಲವಾಗಿ ಸ್ಥಾನ ಪಡೆದಿದ್ದಾರೆ. ಮೊದಲಿನಿಂದಲೂ ಭಾರತೀಯ ಸೇನೆಎಂದರೆ ಒಂದು ವಿಶೇಷ ಗೌರವವಿತ್ತು. ಈ ಸೇನೆ ಕೇವಲ ಸಂಬಳಕ್ಕಾಗಿ ಕೆಲಸ ಮಾಡುತ್ತಿಲ್ಲ, ಇದು ಭಾರತ ಮಾತೆಯ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟ ಸೇನೆ.

ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡುವ ಮೂಲಕ ಅವರಿಗೆ ಬೆಂಬಲವಾಗಿ ನಿಂತ ಮೋದಿ ಸರಕಾರಕ್ಕೆ ಸ್ವಲ್ಪವಾದರೂ ಗೌರವ ಸಲ್ಲಿಸಬೇಕಲ್ಲವೆ..?  ಹೌದು ಗೆಳೆಯರೇ , ಸೇನೆಯ ಈ ಕೆಲಸದ ಹಿಂದೆ ಇಂದಿನ ಸರಕಾರದ ಬೆಂಬಲವು ಇರುವುದರಿಂದಲೇ ಇದೆಲ್ಲ ಸಾಧ್ಯವಾಗಿದೆ. ಇಂತಹ ಬಲವಾದ ನಾಲ್ಕನೆಯ ಅತಿದೊಡ್ಡ ಸೈನ್ಯದ ಬಲವನ್ನು ಇನ್ನೂ ಹೆಚ್ಚಿಸುವ ನಿಟ್ಟಿನಲ್ಲಿ ಮೋದಿಸರಕಾರ ಮತ್ತೊಂದು ಹೆಜ್ಜೆಯನ್ನು ಇಟ್ಟಿದೆ. ಆ ಮೂಲಕ ವಿಶ್ವದ ಮುಂದುವರೆದ ಸೇನೆಗಳ ಸಾಲಿನಲ್ಲಿ ಹೆಜ್ಜೆಯಿಡುವತ್ತತೆಗೆದುಕೊಂಡು ಹೋಗುವುದು ಸರಕಾರದ ಗುರಿಯಾಗಿದೆ.

Untitled2 - ಭಾರತೀಯ ಸೇನೆ ಈಗ ಹಿಂದೆಂದಿಗಿಂತಲೂ ಬಲಿಷ್ಟವಾಗಲಿದೆ...! ಇದಕ್ಕೆ ಕಾರಣವೇನು..?

ರಷ್ಯಾ ನಿರ್ಮಿತ  ಎಕೆ-203 ಇದು ಅತ್ಯಾಧುನಿಕ ರೈಫಲ್ ಆಗಿದ್ದು, ಇದನ್ನು ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ಅಮೇಥಿಯ ಆರ್ಮ್ಸ್ ತಯಾರಿಕಾ ಘಟಕದಲ್ಲಿ ತಯಾರಿಸಿ ಸೇನೆಗೆ ಒದಗಿಸಲು ಸಿದ್ಧತೆ ನಡೆಸಿದೆ. ಇದು ಘಾತುಕ ರೈಫಲ್ ಎಕೆ-47 ನ ಸುಧಾರಿತ ತಂತ್ರಜ್ಞಾನವಾಗಿದ್ದು, ಇದನ್ನು ಹಂತ ಹಂತವಾಗಿ ಎಲ್ಲ ಧರ್ಜೆಯ ಭದ್ರತಾ ಪಡೆಗಳಿಗೆ ಒದಗಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಏನು ಇದರ ಸಾಮರ್ಥ್ಯ ..?

ಎಕೆ-203 ರೈಫಲ್ ಗಳು ಅರೆ ಸ್ವಯಂ ಚಾಲಿತ ಮತ್ತು ಸ್ವಯಂ ಚಾಲಿತ  ಎರಡು ಬಗೆಯ ಮಾದರಿಗಳಲ್ಲಿ ಲಭ್ಯವಿರಲಿದೆ. ಪೂರ್ಣ ಪ್ರಮಾಣದ ರೈಫಲ್ ನ ಉದ್ದ 940 ಎಂ.ಎಂ. ಬ್ಯಾರಲ್ ನ ಉದ್ದ ೪೧೫ ಎಂ. ಎಂ. ಹೊಂದಿದೆ. ಈ ರೈಫಲ್ ಒಂದು ನಿಮಿಷಕ್ಕೆ 600 ಬುಲೆಟ್ ಗಳನ್ನು ಫೈರ್ ಮಾಡುವ ಅತ್ಯಂತ ಘಾತುಕ ಶಸ್ತ್ರವಾಗಿದೆ. ಇದರ ಒಂದು ಮ್ಯಾಗ್ ಜಿನ್ ನಲ್ಲಿ 30 ಬುಲೆಟ್ ಗಳು ಇರಲಿದ್ದು, ಕೆವಲ ಮೂರು ಸೆಕೆಂಡ್ ಗಳಲ್ಲಿ ಅವುಗಳನ್ನು ಫೈರ್ ಮಾಡಬಹುದಾಗಿದೆ. ಇದು ಎಲ್ಲ ಹವಾಗುಣದಲ್ಲೂ ಉತ್ತಮ ಕಾರ್ಯವನ್ನು ನಿರ್ವಹಿಸಲಿದ್ದು,  ಜಾಮ್ ಆಗುವ ಸಂಭವವೇ ಇರುವುದಿಲ್ಲ. ಇದು 4.1 ಕೆಜಿ ತೂಕವನ್ನು ಹೊಂದಿದ್ದು, 400 ಮೀಟರ್ ದೂರದ ನೇರ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿದೆ.

Untitled 4 - ಭಾರತೀಯ ಸೇನೆ ಈಗ ಹಿಂದೆಂದಿಗಿಂತಲೂ ಬಲಿಷ್ಟವಾಗಲಿದೆ...! ಇದಕ್ಕೆ ಕಾರಣವೇನು..?

ಈ ಅತ್ಯಾಧುನಿಕ ಅಸ್ತ್ರವನ್ನು ತಯಾರಿಸಲು ಕೇಂದ್ರ ಸರಕಾರ 700 ಕೋಟಿ ರೂಪಾಯಿ ಮೊತ್ತದ ಒಪ್ಪಂದ ಮಾಡಿಕೊಂಡಿದ್ದು, ಒಂದು ವರ್ಷದೊಳಗೆ 72,400 ರೈಫಲ್ ಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ. ಈ ಅತ್ಯಾಧುನಿಕ ಆಯುಧವನ್ನು ವಿಶ್ವದ ನಾನಾ ದೇಶಗಳು ಹೊಂದಿದ್ದು, ತಮ್ಮ ಶಕ್ತಿಯನ್ನು ಇಮ್ಮಡಿಗೊಳಿಸಿಕೊಂಡಿವೆ. ಅತ್ಯಂತ ವೇಗದ ಗನ್ ನ್ನು ಸೇನೆಗೆ ನೀಡುವ ಮೂಲಕ ಗೇಮ್ ಚೆಂಜರ್ ಹೆಜ್ಜೆಯನ್ನು ಇಟ್ಟಿರುವುದು ಸಂತಸದ ವಿಷಯವಾಗಿದೆ.

Image Copyright: google.com

ಮೂಲ ಕನ್ನಡಪ್ರಭ

 

LEAVE A REPLY

Please enter your comment!
Please enter your name here