ಬೆಳ್ಳಂ ಬೆಳಗ್ಗೆ ಮಹಾಬಲಿಪುರಂ ಬೀಚ್‌ನಲ್ಲಿ ಪ್ರಧಾನಿ ಮೋದಿಯಿಂದ ಸ್ವಚ್ಛತೆ

0
21
PM Modi Cleaning at Mahabalipuram Beach

ಮಹಾಬಲಿಪುರಂ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಬೇಟಿಗೆ ಮಹಾಬಲಿಪುರಂನಲ್ಲಿ ತಂಗಿರುವ ನರೇಂದ್ರ ಮೋದಿಯವರು ಇಂದು ಬೆಳ್ಳಂ ಬೆಳಗ್ಗೆ ಮಹಾಬಲಿಪುರಂ ಬೀಚ್‌ನಲ್ಲಿ ಸ್ವಚ್ಛತೆ ಕಾರ್ಯ ಮಾಡಿದ್ದಾರೆ. ಬೆಳಿಗ್ಗೆ ಪ್ರತಿನಿತ್ಯ ಯೋಗಾಸನ, ಧ್ಯಾನ ಮಾಡುತ್ತಿದ್ದ ಅವರು ಇಂದು ಬೆಳಿಗ್ಗೆ ವಾಕಿಂಗ್ ಸಲುವಾಗಿ ಬೀಚ್ ಗೆ ಬಂದಿದ್ದಾರೆ. ಕಡಲ ತೀರದಲ್ಲಿ ಬಿದ್ದಿದ್ದ ಕೆಲವು ಪ್ಲಾಸ್ಟಿಕ್ ಅವರನ್ನು ತನ್ನತ್ತ ಸೆಳೆದಿದೆ. ತಕ್ಷಣ ತಡಮಾಡದೆ ಅವುಗಳನ್ನು ತೆಗೆದು ಸ್ವಚ್ಚಮಾಡುವ ಪ್ರಯತ್ನ ಮಾಡಿದ್ದಾರೆ.

ಕಡಲ ತೀರದಲ್ಲಿ ನಡೆದಾಡುವ ಸಮಯದಲ್ಲಿ ಅಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಗಳನ್ನು ಮೊದಲಿಗೆ ಬರಿಗೈಯಲ್ಲಿ ತೆಗೆಯುವ ಪ್ರಯತ್ನವನ್ನು ಮಾಡಿದ್ದಾರೆ. ಕೈನಲ್ಲಿ ಹಿಡಿಯದಿದ್ದಾಗ ಪ್ಲಾಸ್ಟಿಕ್ ಕವರ್ ಒಂದನ್ನು ತೆಗೆದುಕೊಂಡು ಅದರಲ್ಲಿ ಹಲವಾರು ಬಾಟಲಿಗಳು ಸೇರಿದಂತೆ ಚೆಲ್ಲಿದ್ದ ಹಲವಾರು ಪ್ಲಾಸ್ಟಿಕ್ ಉತ್ಪನ್ನಗಳನ್ನು ತೆಗೆದಿದ್ದಾರೆ. ಸುಮಾರು ಅರ್ಧಗಂಟೆಗಳ ಕಾಲ ಈ ಕಾರ್ಯ ನಡೆಸಿದ ಅವರು ನಂತರ ಹೋಟೆಲ್ ಸಿಬ್ಬಂದಿಗೆ ಅವುಗಳನ್ನು ನೀಡಿ ತೆರಳಿದ್ದಾರೆ.

ಇದನ್ನೂ ಓದಿರಿ: ಕ್ಸಿ ಜಿನ್ ಪಿಂಗ್ ಎರಡು ದಿನ ಭಾರತ ಪ್ರವಾಸ, ಪಂಚೆಯುಟ್ಟು ಮಿಂಚಿದ ಮೋದಿ

PM Modi Cleaning at Mahabalipuram Beach-002
Image Credit: Twitter.com

ಮಹಾಬಲಿಪುರಂನ ಕಡಲತೀರದಲ್ಲಿ ನಡೆದ ಈ ಘಟನೆಯ ವಿಡಿಯೋ ಕೆಲವೇ ಕ್ಷಣದಲ್ಲಿ ವೈರಲ್ ಆಗಿದೆ. ಸಧ್ಯ ನರೇಂದ್ರ ಮೋದಿಯವರು ತಾವೇ ಸ್ವಚ್ಚ ಮಾಡುವ ಮೂಲಕ ದೇಶದ ಜನತೆಗೆ ನಮ್ಮ ಸುತ್ತಲಿನ ಪರಿಸರವನ್ನು ಪ್ಲಾಸ್ಟಿಕ್ ಮುಕ್ತವಾಗಿಸೋಣ ಎಂಬ ಸಂದೇಶವನ್ನು ನೀಡಿದ್ದಾರೆ. ಕೇವಲ ಮಾತುಗಳಿಗೆ ಸೀಮಿತರಾಗಿರುವ ರಾಜಕಾರಣಿಗಳ ಪೈಕಿ ನುಡಿದಂತೆ ನಡೆದು ದೇಶದ ಜನತೆಯ ಮುಂದೆ ವಿಶೇಷ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಅವರ ಆಶಯದಂತೆ ನಾವೆಲ್ಲಾ ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಚಗೊಲಿಸುತ್ತ ಮಾಲಿನ್ಯ ಮುಕ್ತವಾಗಿಸೋಣ.

ಇದನ್ನೂ ಓದಿರಿ: ವಿಜಯದಶಮಿ ಹಿನ್ನೆಲೆಯಲ್ಲಿ ರಾವಣ ದಹನ ಮಾಡಿದ ನರೇಂದ್ರ ಮೋದಿ

LEAVE A REPLY

Please enter your comment!
Please enter your name here