2019 ರ ಲೋಕಸಭಾ ಚುನಾವಣೆಗೆ ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ

0
73

ಲೋಕಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 182 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದ್ದು, ಕರ್ನಾಟಕದ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆಯಾಗಿದೆ.

ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾದ ನರೇಂದ್ರ ಮೋದಿಯವರು  ಈ ಭಾರಿಯೂ ವಾರಣಾಸಿಯಿಂದಲೇ ಸ್ಪರ್ಧಿಸುತ್ತಿದ್ದಾರೆ. ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗಾಂಧಿನಗರ, ಸ್ಮೃತಿ ಇರಾನಿ ಅಮೇಥಿ, ಲಕ್ನೋದಿಂದ ರಾಜನಾಥ್ ಸಿಂಗ್, ನಾಗ್ಪುರದಿಂದ ನಿತಿನ್ ಗಡ್ಕರಿ, ಅರುಣಾಚಲ ಪೂರ್ವದಿಂದ ಕಿರಣ್ ರಿಜುಜ್, ಉತ್ತರ ಕನ್ನದದಿಂದ ಅನಂತ ಕುಮಾರ ಹೆಗಡೆ, ಕಲಬುರಗಿ ಯಿಂದ ಡಾ. ಉಮೇಶ್ ಜಾದವ್ ಸ್ಪರ್ಧಿಸಲಿದ್ದಾರೆ.

SPONSORED CONTENT

LEAVE A REPLY

Please enter your comment!
Please enter your name here