ನಾಳೆ ಚಿತ್ರ ರಿಲೀಸ್ ಆಗೇ ಆಗುತ್ತದೆ..! ಚಿತ್ರ ನಿರ್ಮಾಪಕ ವಿಜಯ್ ಕಿರಗಂದೂರು..!

0
75

ಟ್ರೈಲರ್ ನಿಂದ ಭಾರಿ ಸದ್ದು ಮಾಡಿದ್ದ ಕನ್ನಡ ಬಹುನಿರೀಕ್ಷಿತ ಸಿನೆಮಾ ಕೆಜಿಎಫ್ ಬಿಡುಗಡೆಗೆ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಎಲ್ಲ ಅಭಿಮಾನಿಗಳಲ್ಲಿ ಬೇಸರ ಉಂಟುಮಾಡಿದೆ. ಆದರೆ ಈ ನಡುವೆ ಈ ಚಿತ್ರದ ನಿರ್ಮಾಪಕ ವಿಜಯ ಕಿರಗಂದೂರು ಅವರು ನಾಳೆ ರಿಲಿಸ್ ಆಗಿಯೇ ಆಗುತ್ತದೆ ಎಂದು ಹೇಳಿದ್ದಾರೆ.

ನಿರ್ಮಾಪಕ ವಿಜಯ ಕಿರಗಂದೂರು ಅವರು ಒಂದು ವಿಡಿಯೋವೊಂದನ್ನು ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದು ಅದರಲ್ಲಿ ಅಭಿಮಾನಿಗಳಲ್ಲಿ ಯಾವುದೇ ಭಯ ಬೇಡ ನಾಳೆ ಚಿತ್ರ ಮಂದಿರಗಳಲ್ಲಿ ಕೆಜಿಎಫ್ ಬಿಡುಗಡೆಯಾಗಲಿದೆ. ಮುಂಗಡ ಟಿಕೆಟ್ ಬುಕ್ ಮಾಡುವವರು ಚಿಂತಿಸಬೇಕಾದ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಯಶ್ ಟ್ವೀಟ್ ಮಾಡಿ ನಾಳೆ ಚಿತ್ರ ನೋಡಲು ತಯಾರಾಗಿ, ಯಾವುದೇ ಆತಂಕ ಬೇಡ ಎಂದು ಹೇಳಿದ್ದಾರೆ.

ಇದನ್ನೂ ಓದಿರಿ : ಕೆಜಿಎಫ್ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ..!

 

ಚಿತ್ರದ ಕುರಿತಂತೆ ವೆಂಕಟೇಶ ಎಂಬುವವರು ತಾನು ರೈಟ್ಸ್ ಹೊಂದಿರುವ “ರೌಡಿ ಶಿಟರ್ ತಂಗಂ” ಜೀವನ ಕುರಿತಾದ ಚಿತ್ರವಾಗಿದೆ. ಈ ಕತೆಯ ಚಿತ್ರೀಕರಣಕ್ಕಾಗಿ ಈ ಮೊದಲೇ ಹಕ್ಕು ಪಡೆದಿದ್ದೇನೆ ಎಂದು ಕೋರ್ಟ್ ಮುಂದೆ ವಾದ ಮಂಡಿಸಿದ್ದು, ಅವರ ವಾದವನ್ನು ಪರಿಶೀಲಿಸಿದ ಹತ್ತನೇ ಸಿಟಿ ಸಿವಿಲ್  ಕೋರ್ಟ್  2019 ಜನವರಿ 7ರ ವರೆಗೆ ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿತ್ತು.

 

 

Image Copyright: google.com

 

LEAVE A REPLY

Please enter your comment!
Please enter your name here