“ಬಾಕ್ಸಿಂಗ್ ಡೇ ಟೆಸ್ಟ್” ಗೆದ್ದು ಬೀಗಿದ ಭಾರತ..!

0
62

ಮೆಲ್ಬರ್ನ್ : ನಿರೀಕ್ಷೆಯಂತೆಯೇ ಮೂರನೇ ಮತ್ತು “ಬಾಕ್ಸಿಂಗ್ ಡೇ ಟೆಸ್ಟ್” ಪಂದ್ಯವನ್ನು ಭಾರತ ತಂಡ 137 ರನ್ನುಗಳಿಂದ ಗೆದ್ದು ಬೀಗಿದೆ. ಈ ಪಂದ್ಯ ಗೆಲ್ಲುವ ಮೂಲಕ ಬಾರ್ಡರ್ – ಗವಾಸ್ಕರ್ ಟೆಸ್ಟ್ ಸರಣಿ ಪಂದ್ಯದಲ್ಲಿ 2-1 ರ ಮುನ್ನಡೆ ಸಾಧಿಸಿದೆ.

ಭಾರತ ಪಂದ್ಯ ಗೆಲ್ಲಲು ನೀಡಿದ್ದ 399 ರನ್ನುಗಳನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ ನಲ್ಲಿ 261 ರನ್ನುಗಳಿಗೆ ಆಲ್ ಔಟ್ ಆಯಿತು. ಇನ್ನು ನಾಲ್ಕನೇಯ ದಿನ 258 ರನ್ನು ಗಳಿಸಿದ್ದ ಆಥಿತೆಯ ಪಡೆ ಇಂದು ಮೂರೂ ರನ್ನುಗಳನ್ನು ಪೇರಿಸುವಷ್ಟರಲ್ಲೇ ತನ್ನೆಲ್ಲ ವಿಕೆಟ್ ಕಳೆದುಕೊಂಡು ಶರಣಾಯಿತು.

ಈ ಮೂಲಕ ಭಾರತ ತಂಡ ಬಾಕ್ಸಿಂಗ್ ಡೇ ಟೆಸ್ಟ್ ನಲ್ಲಿ ಮೊದಲ ಜಯಗಳಿಸಿ ಸಾಧನೆ ಮಾಡಿದೆ. ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳಲ್ಲಿ ಭಾರತ 1985 ರಿಂದ ಭಾಗವಹಿಸುತ್ತ ಬಂದರೂ ಇದುವರೆಗೆ 5 ಸೋಲು 2 ಪಂದ್ಯ ಡ್ರಾ ಮತ್ತು ಒಂದು ಪಂದ್ಯವನ್ನು ಈಗ ಗೆದ್ದಂತಾಗಿದೆ. ಇದಲ್ಲದೆ 37 ವರ್ಷಗಳ ನಂತರ ಮೆಲ್ಬರ್ನ್ ಅಂಗಳದಲ್ಲಿ ಕೋಹ್ಲಿ ಪಡೆ ಮೊದಲ ಗೆಲುವನ್ನು ಸಾಧಿಸುವ ಮೂಲಕ ದೊಡ್ಡ ಸಾಧನೆಯನ್ನು ಮಾಡಿದ್ದಾರೆ. ಈ ಮೂಲಕ 2018 ರಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಗೆದ್ದ ಹೆಗ್ಗಳಿಕೆಗೆ ಪಾತ್ರವಾಯಿತು.

ಇದನ್ನೂ ಓದಿರಿ I ಬಾಕ್ಸಿಂಗ್ ಡೇ ಟೆಸ್ಟ್: ಏಳರ ಪೋರ ಆಸೀಸ್ ಗೆ ಸಹನಾಯಕ..!

Image Copyright : google.com

LEAVE A REPLY

Please enter your comment!
Please enter your name here