ಕೂದಲಿನ ರಕ್ಷಣೆಯ ಹೆಸರಿನಲ್ಲಿ ನಾವು ಮಾಡುತ್ತಿರುವ ಭಯಂಕರ ತಪ್ಪುಗಳು..!

0
77

ನಾವು ಇಂದು ಸುಂದರವಾಗಿ ಕಾಣುವಂತೆ ಮಾಡಲು ಮತ್ತು ತಲೆ ಹೊಟ್ಟು ನಿವಾರಣೆಗಾಗಿ ಅನೇಕ ಬಗೆಯ ರಾಸಾಯನಿಕಗಳಿಂದ ಕೂಡಿದ ಶಾಂಪೂಗಳನ್ನು ಬಳಸುತ್ತಿದ್ದೇವೆ. ಅಲ್ಲದೇ ನಮ್ಮ ತಪ್ಪು ತಿಳುವಳಿಕೆಯಿಂದಾಗಿ ಸರಿಯಲ್ಲದ ವಿಧಾನಗಳನ್ನು ಅನುಸರಿಸುತ್ತಿದ್ದೇವೆ. ಕೂದಲಿನ ರಕ್ಷಣೆಯ ಹೆಸರಿನಲ್ಲಿ ಮಾಡುವ ತಪ್ಪುಗಳನ್ನು ತಿದ್ದಿಕೊಂಡರೆ ಉತ್ತಮ ಮತ್ತು ಸುಂದರವಾದ ಕೂದಲು ನಿಮ್ಮದಾಗಬಹುದು.

  • ಎಣ್ಣೆಯ ಲೇಪನ

ಕೂದಲು ಸೊಂಪಾಗಿ ಬೆಳೆಯಲು ಕೂದಲಿಗೆ ಎಣ್ಣೆಯನ್ನು ಬಳಸುವುದು ಮಾಮೂಲಿ. ಆದರೆ ಇದರ ಬಳಕೆ ಹೇಗೆ ಮಾಡಬೇಕೆಂದು ತಿಳಿಯದೆ ಕೂದಲಿಗೆ ಹಾನಿಯನ್ನು ಮಾಡಿಕೊಳ್ಳುತ್ತಿದ್ದೇವೆ. ಉತ್ತಮ ಕೂದಲಿನ ಬೆಳವಣಿಗೆಗೆ ಎಣ್ಣೆಯ ಅಗತ್ಯವಿದ್ದು, ಎಣ್ಣೆಯನ್ನು ಹಚ್ಚುವುದರಿಂದ ತೊಂದರೆಯಾಗದಂತೆ ತಡೆಯಲು ಸ್ನಾನಕ್ಕೆ ಒಂದು ಗಂಟೆಗಳ ಮುಂಚಿತವಾಗಿ ಎಣ್ಣೆಯನ್ನು ಚೆನ್ನಾಗಿ ಹಚ್ಚುತ್ತ ಮಸಾಜ್ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ಜಿಗುಟು ಉಂಟಾಗಿ ಉದುರುವ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ದೂಳಿನ ಕಣಗಳು ಸೇರಿಕೊಂಡು ಕೂದಲು ಉದುರುವಿಕೆ ಮತ್ತು ತಲೆಹೊಟ್ಟು ಸಮಸ್ಯೆಯು ಉಂಟಾಗುದನ್ನು ತಡೆಗಟ್ಟಬಹುದು.

  • ಶಾಂಪೂಗಳ ಬಳಕೆ

ಇಂದಿನ ದಿನಗಳಲ್ಲಿ ಜಾಹಿರಾತುಗಳನ್ನು ನಂಬಿ ಮೊಸಹೋಗುವವರೇ ಹೆಚ್ಚು. ಸುಂದರ, ಉದ್ದನೆಯ ಮತ್ತು ಹೊಟ್ಟುರಹಿತ ಕುದಲಿಗಾಗಿ ಅನೇಕ ಬಗೆಯ ಶಾಂಪೂಗಳನ್ನುಬಳಸುತ್ತಾರೆ. ಇದನ್ನು ಪ್ರತಿನಿತ್ಯ ಬಳಸುವುದರಿಂದಶಾಂಪೂವಿನಲ್ಲಿರುವ ಕೆಮಿಕಲ್ ಗಳ ಪರಿಣಾಮವಾಗಿ ತೊಂದರೆಗಳು ಉಂಟಾಗುತ್ತವೆ.

ಇದನ್ನೂ ಓದಿರಿ:ಈ ಸೊಪ್ಪಿನಲ್ಲಿದೆ ಅಸ್ತಮಾ, ಹೊಟ್ಟೆಹುಣ್ಣು ಮುಂತಾದ ಸಮಸ್ಯೆಗಳನ್ನು ನಿವಾರಿಸುವ ಗುಣ..!

haircare mistakes youre probably making - ಕೂದಲಿನ ರಕ್ಷಣೆಯ ಹೆಸರಿನಲ್ಲಿ ನಾವು ಮಾಡುತ್ತಿರುವ ಭಯಂಕರ ತಪ್ಪುಗಳು..!

  • ರಾಸಾಯನಿಕ ಸ್ಪ್ರೇ, ಜೆಲ್ ಗಳ ಬಳಕೆ

ಇಂದಿನ ಯುವ ಜನಾಂಗ ತಮ್ಮ ಕೂದಲನ್ನು ಬೇರೆ ಬೇರೆ ಸ್ಟೈಲ್ ಮಾಡುವ ಬರದಲ್ಲಿ ಪ್ರತಿನಿತ್ಯ ತಮ್ಮ ಕೂದಲಿಗೆ ಜೆಲ್ ಗಳು ಮತ್ತು ರಾಸಾಯನಿಕಗಳನ್ನು ಬಳಕೆ ಮಾಡುತ್ತಾರೆ. ಇದರಿಂದಾಗಿ ಬಿಳಿಕೂದಲಿನಂತಹ ಗಂಭೀರ ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾರೆ. ಕೇವಲ ಬಿಳಿಕೂದಲ ಸಮಸ್ಯೆಯಲ್ಲದೆ ತಲೆಹೊಟ್ಟು, ಕೂದಲು ಉದುರುವಿಕೆ ಸಹ ಕಾಣಿಸಿಕೊಳ್ಳುತ್ತದೆ.

  • ಒದ್ದೆಕೂದಲು ಉಜ್ಜುವುದು

ಸ್ನಾನವಾದ ಕೂಡಲೇ ಒದ್ದೆ ಕೂದಲನ್ನು ಟವೆಲ್ ಗಳಿಂದ ಗಟ್ಟಿಯಾಗಿ ಉಜ್ಜುತ್ತಾರೆ. ಹೀಗೆ ಮಾಡುವುದರಿಂದ ಕೂದಲು ಹೆಚ್ಚಾಗಿ ಉದುರುತ್ತದೆ. ಸ್ನಾನವಾದ ನಂತರ ಕೂದಲನ್ನು ಗಾಳಿಗೆ ಆರಲು ಬಿಡುವುದು ಉತ್ತಮ. ನಂತರದಲ್ಲಿ ನಿಧಾನವಾಗಿ ಸಿಕ್ಕನ್ನು ಬಿಡಿಸಿಕೊಲ್ಲುವುದರಿಂದ ಉದುರುವಿಕೆ ತಡೆಗಟ್ಟಬಹುದು.

  • ಕೂದಲು ಕಟ್ಟುವುದು

ಇಂದಿನ ದಿನಗಳಲ್ಲಿ ಸಮಯದ ಕೊರತೆ ಎಲ್ಲರನ್ನೂ ಕಾಡುತ್ತಿದೆ, ಹಾಗೆಂದು ಒದ್ದೆಕೂದಲನ್ನು ಕಟ್ಟುವುದರಿಂದ ತೊಂದರೆಗಳು ಉಂಟಾಗುತ್ತವೆ. ಆಫೀಸ್ ಮತ್ತು ವಿವಿಧ ಕೆಲಸಗಳಿಗೆ ತೆರಳುವ ಅವಸರದಲ್ಲಿ ಒದ್ದೆ ಕೂದಲನ್ನೇ ಜಡೆ ಹೆಣೆದುಕೊಂಡು ಹೋಗುವುದರಿಂದ ಕೂದಲು ಉದುರುವಿಕೆ ಸಮಸ್ಯೆಯು ಇನ್ನೂ ಉಲ್ಬಣವಾಗುತ್ತದೆ.

haircare mistakes youre probably making and what to do instead 1 - ಕೂದಲಿನ ರಕ್ಷಣೆಯ ಹೆಸರಿನಲ್ಲಿ ನಾವು ಮಾಡುತ್ತಿರುವ ಭಯಂಕರ ತಪ್ಪುಗಳು..!

  • ಹೇರ್ ಸ್ಟ್ರೆಟ್ನಿಂಗ್ ಮಾಡುವುದು

ಹೊಸಹೊಸ ತಂತ್ರಜ್ಞಾನಗಳು ಇಂದು ಮಾನವನ ಅವಶ್ಯಕತೆಗಳಾಗಿವೆ. ಅಂತೆಯೇ ಬೇರೆ ಬೇರೆ ರೀತಿಯ ಕೂದಲಿನ ವಿನ್ಯಾಸಗಳೂ ಹೆಚ್ಚಾಗಿವೆ. ಈ ರೀತಿ ಮಾಡುವಾಗ ಉಷ್ಣತೆಯಪ್ರಮಾಣದಲ್ಲಿನ ಏರು ಪೇರುಗಳು ಕೂದಲನ್ನು ಹಾನಿಗೊಳಿಸಬಲ್ಲವು. ಇದರಿಂದಾಗಿ ಕೂದಲು ಉದುರಬಲ್ಲವು.

ನಾವು ಕೂದಲನ್ನು ಚೆನ್ನಾಗಿ ನೋಡಿಕೊಳ್ಳುವ ಭರದಲ್ಲಿ ಅನೇಕ ತಪ್ಪುಗಳನ್ನು ಮಾಡುತ್ತೇವೆ. ಇದರಿಂದಾಗಿ ತೊಂದರೆಗಳನ್ನೂ ಅನುಭವಿಸುತ್ತಿದ್ದೇವೆ. ಇಂತಹ ಸಮಸ್ಯೆಗಳ ಪರಿಹಾರಕ್ಕಾಗಿ ಕೆಲವು ಸಲಹೆಗಳನ್ನು ನೀಡುವ ಸಣ್ಣ ಪ್ರಯತ್ನ ನಮ್ಮಿಂದಾಗಿದೆ ಎಂದು ಭಾವಿಸುತ್ತೇವೆ. ಈ ಮಾಹಿತಿಯಿಂದ ನಿಮಗೆ ಏನಾದರು ಸಹಾಯವಾಗುತ್ತದೆ ಎಂದಾದರೆ ಇತರರಿಗೂ ತಿಳಿಸಲು ಶೇರ್ ಮಾಡಿ..

ಇದನ್ನೂ ಓದಿರಿ :
ಪಿಸ್ತಾ ಸೇವಿಸುವುದರಿಂದ ಉಂಟಾಗುವ ಪ್ರಯೋಜನಗಳನ್ನು ತಿಳಿದರೆ ನೀವು ದಂಗಾಗುತ್ತಿರಿ..!

ನೀವು ಈ ಆಹಾರ ಪದ್ಧತಿ ಅನುಸರಿಸಿದರೆ ರಾತ್ರಿ ಒಳ್ಳೆಯ ನಿದ್ರೆ ಮಾಡಬಹುದು ನೋಡಿ..!

Image Copyright: google.com

LEAVE A REPLY

Please enter your comment!
Please enter your name here