ಬ್ರೇಕಿಂಗ್ ನ್ಯೂಸ್ : ಇ.ಡಿ. ಅಧಿಕಾರಿಗಳಿಂದ ಡಿ.ಕೆ. ಶಿವಕುಮಾರ್ ಬಂಧನ

0
58
https://varthavani.com/wp-admin/post.php?post=1682&action=edit
Image Credit: google.com

ನವದೆಹಲಿ : ಸತತ ನಾಲ್ಕನೆಯ ದಿನವು ವಿಚಾರಣೆಗೆ ಕರೆದಿದ್ದ ಇ.ಡಿ. ಅಧಿಕಾರಿಗಳು, ಮಂಗಳವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ವಿಚಾರಣೆ ನಡೆಸಿ ಇನ್ನೂ ಹೆಚ್ಚಿನ ವಿಚಾರಣೆಗಾಗಿ ಡಿ.ಕೆ. ಶಿವಕುಮಾರ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ತಮ್ಮ ದೆಹಲಿಯ ನಿವಾಸದಲ್ಲಿ ದೊರೆತ ಹಣಕಾಸಿನ ಸಂಬಂಧ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ.

dk-shivakumar-arrested-by-enforcement-directorate-in-alleged-money-laundering-case
Image Credit: Google.com

ಈ ನಡುವೆ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿ ಕರೆದೊಯ್ಯುವ ವೇಳೆಯಲ್ಲಿ, ಕಚೇರಿಯ ಬಾಗಿಲಲ್ಲಿ ತುಂಬಿಹೋಗಿದ್ದ ಅಭಿಮಾನಿಗಳಿಂದ ಪ್ರತಿಬಟನೆಯು ನಡೆಯಿತು. ಕಾರನ್ನು ತಡೆಯಲು ಅಭಿಮಾನಿಗಳು ಮತ್ತು ಬೆಂಬಲಿಗರು ಪ್ರಯತ್ನಿಸಿದರೂ. ತಕ್ಷಣ ಎಚ್ಚೆತ್ತ ಬದ್ರತಾ ಪಡೆಯ ಅಧಿಕಾರಿಗಳು ಪ್ರತಿಬಟನಾಕಾರರನ್ನು ಚದುರಿಸಿ ವಾಹನ ಸಾಗಲು ದಾರಿ ಮಾಡಿ ಕೊಟ್ಟರು.

dk-shivakumar-arrested-by-enforcement-directorate-in-alleged-money-laundering-case
Image Credit: google.com

ಡಿ.ಕೆ. ಶಿವಕುಮಾರ್ ಅವರ ನಿವಾಸದಲ್ಲಿ ದೊರೆತ 8.59 ಕೋಟಿ ಮೊತ್ತದ ದಾಖಲೆಯಿಲ್ಲದ ಹಣ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ಸತತ ಮೂರೂ ದಿನಗಳಿಂದ ವಿಚಾರಣೆಗೆ ಹಾಜರಾಗಿದ್ದ ಅವರು ಇಂದು ಸಹ ಬಂದಿದ್ದರು. ನಿನ್ನೆ ಗಣೇಶ ಚತುರ್ಥಿ ಮತ್ತು ತಂದೆಯವರ ದಿನ ಎಡೆಯಿದಲು ಅವಕಾಶ ನೀಡಲಿಲ್ಲವೆಂದು ಹೈಡ್ರಾಮ ಮಾಡಿದ್ದರು. ಆದರೆ ಇಂದು ತಮ್ಮ ವಿಚಾರಣೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂಬ ನೆಪವೊಡ್ಡಿ ಡಿ.ಕೆ.ಶಿ. ಅವರನ್ನು ಬಂದಿಸಲಾಗಿದೆ.

ಇದನ್ನೂ ಓದಿರಿ: ಭಾರತೀಯ ಸೇನಾಪಡೆಗೆ ಅತ್ಯಾಧುನಿಕ 8 ಅಪಾಚೆ ಹೆಲಿಕಾಪ್ಟರ್ ಸೇರ್ಪಡೆ

SPONSORED CONTENT

LEAVE A REPLY

Please enter your comment!
Please enter your name here