ಚಂದ್ರಯಾನ-2 : ವಿಕ್ರಮ್ ರೋವರ್ ಲ್ಯಾಂಡಿಂಗ್ ನ ಸವಾಲುಗಳು

0
83
Challenges of Vikram Rover Landing-2
Image Credit: google.com

ಚಂದ್ರಯಾನ-2 ರ ವಿಕ್ರಮ್ ರೋವರ್ ಲ್ಯಾಂಡಿಂಗ್ ಪ್ರಕ್ರಿಯೆಗೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಭಾರತ ಈ ಪ್ರಕ್ರಿಯೆಯಲ್ಲಿ ಯಶಸ್ವಿಯಾದರೆ ಚಂದ್ರನ ಮೇಲೆ ಸಾಪ್ಟ್ ಲ್ಯಾಂಡಿಂಗ್ ಮೂಲಕ ಉಪಗ್ರಹ ಇಳಿಸಿದ ನಾಲ್ಕನೇ ದೇಶವಾಗಲಿದೆ. ಉಡಾವಣೆ ಗೊಂಡ ದಿನದಿಂದ ತನ್ನೆಲ್ಲ ಕ್ರಿಯೆಗಳನ್ನು ಯಶಸ್ವಿಯಾಗಿ ಪೂರೈಸಿರುವ ಚಂದ್ರಯಾನ-2 ಇನ್ನೊಂದೇ ಮೆಟ್ಟಿಲು ಏರಬೇಕಿದೆ. ಆದರೆ ರೋವರನ್ನು ಸಾಪ್ಟ್ ಲ್ಯಾಂಡಿಂಗ್ ಮೂಲಕ ಇಳಿಸುವುದು ಸುಲಭದ ಕೆಲಸವಾಗಿಲ್ಲ. ಈ ಪ್ರಕ್ರಿಯೆಗೆ ಹಲವಾರು ಅಡೆತಡೆಗಳಿವೆ.

ವಿಕ್ರಮ್ ರೋವರ್ ತನ್ನ ವೇಗವನ್ನು ಚಂದ್ರನ ಮೇಲ್ಮೈ 800 ಮೀಟರ್ ಎತ್ತರದಲ್ಲಿ ಸ್ವಯಂ ಚಾಲಿತವಾಗಿ ಕಡಿತಗೊಳಿಸಿಕೊಂಡು ಸೆಕೆಂಡಿಗೆ 1.6 ಕಿ.ಮೀ. ವೇಗದಿಂದ ಶೂನ್ಯಕ್ಕೆ ಬರಬೇಕಾಗಿದೆ. ಈ ಕಾರ್ಯದ ಮೇಲೆ ಭೂಮಿಯಿಂದ ಯಾವುದೇ ನಿಯಂತ್ರಣ ಸಾಧಿಸಲು ಸಾಧ್ಯವಿಲ್ಲ.

ವಿಕ್ರಮ್ ರೋವರ್ ತನ್ನ ಲ್ಯಾಂಡಿಂಗ್ ನ ಕೊನೆಯ 15 ನಿಮಿಷಗಳು ಅತೀ ಮುಖ್ಯವಾಗಿದೆ. ಈ ಕಾರ್ಯವು ಆ ಯಂತ್ರದ ಸ್ವಯಂ ನಿಯಂತ್ರಣದ ಮೇಲೆ ನಿರ್ವಹಿಸಲ್ಪಡುತ್ತದೆ. ಈ ಅಪಾಯಕಾರಿಯಾದ 15 ನಿಮಿಷದಲ್ಲಿ ಯಾವುದೇ ಕ್ರೀಯೆಯಲ್ಲಿ ಸ್ವಲ್ಪ ಹೆಚ್ಚು ಕಡಿಮೆಯಾದರೂ ಚಂದ್ರನ ಮೇಲೆ ಅಪ್ಪಳಿಸಿ ಯೋಜನೆ ವಿಪಲಗೊಳ್ಳುವ ಸಾಧ್ಯತೆಗಳಿವೆ. ಈ ಸಮಯದಲ್ಲಿನ ಅಡೆತಡೆಯನ್ನು ನಿಯಂತ್ರಿಸುವ ಕಾರ್ಯ ಭೂಮಿಯಿಂದ ಸಾಧ್ಯವಿಲ್ಲ.

Challenges of Vikram Rover Landing
Image Credit: google.com

ವಿಕ್ರಮ್ ರೋವರ್ ನಲ್ಲಿ ಅತ್ಯಾಧುನಿಕ ಸೆನ್ಸಾರ್ ಗಳನ್ನೂ ಅಳವಡಿಸಲಾಗಿದ್ದು, ಅವುಗಳ ಮೂಲಕ ಅಲ್ಲಿನ ಅಪಾಯಗಳನ್ನು ತಿಳಿದು ತಾನೇ ತನ್ನ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಪುರ್ಣಗೊಳಿಸಿಕೊಳ್ಳಬೇಕಿದೆ.

ಸಾಪ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯು ಅತೀ ಕ್ಲಿಷ್ಟಕರವಾಗಿದ್ದು, ಇದರ ಸಕ್ಸಸ್ ರೇಟ್ ಕೇವಲ ಶೇ.37 ರಷ್ಟು ಮಾತ್ರ ಎಂದು ಹೇಳಲಾಗುತ್ತದೆ. ಇದಲ್ಲದೇ ತಂತ್ರಜ್ಞಾನದಲ್ಲಿ ಮುಂದುವರೆದ ಇಸ್ರೇಲ್ ಉಪಗ್ರಹ ಕಳುಹಿಸಿ ಅದು ಕ್ರಾಶ್ ಆಗುವ ಮೂಲಕ ವಿಪಲಗೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು.

ವಿಕ್ರಮ್ ರೋವರ್ ನ  ಸಾಪ್ಟ್ ಲ್ಯಾಂಡಿಂಗ್ ಪ್ರಕ್ರಿಯೆಯನ್ನು ಭೂಮಿಯ ವಾತಾವರಣದಲ್ಲಿ ಪರೀಕ್ಷಿಸಿದ್ದರೂ ಬಾಹ್ಯಾಕಾಶದಲ್ಲಿ ನಮ್ಮ ನಿರೀಕ್ಷೆಗಳನ್ನು ಪೂರೈಸುವ ಸಾಧ್ಯತೆಗಳು ಸ್ವಲ್ಪ ಮಟ್ಟಿಗೆ ಕಡಿಮೆಯೇ. ಈ ಎಲ್ಲ ಕಾರಣಗಳಿಂದಾಗಿ ಸಕ್ಸಸ್ ರೇಟ್ ಕೇವಲ ಶೇ.37 ರಷ್ಟು ಮಾತ್ರ ಎಂದು ಹೇಳಲಾಗುತ್ತದೆ.

ಭಾರತವು ಈ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಂತು ಈ ಸಾಧನೆಯನ್ನು ಮಾಡುತ್ತದೆ ಎಂಬ ವಿಶ್ವಾಸದಲ್ಲಿ ನಾವಿದ್ದು, ಅದು ಪೂರ್ಣ ಗೊಳ್ಳಲಿ ಎಂದು ಆಶಿಸುತ್ತೇವೆ. ಅಲ್ಲದೇ ಭಾರತದ ಈ ಸಾಧನೆಯನ್ನು  ನೋಡಲು ಜಗತ್ತೇ ಬೆರಗುಗಣ್ಣಿನಿಂದ ಎದುರು ನೋಡುತ್ತಿದೆ.

ಇದನ್ನೂ ಓದಿರಿ: ಇಂದು ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ

ಇದನ್ನೂ ಓದಿರಿ: ಚಂದ್ರಯಾನ -2: ಲ್ಯಾಂಡರ್ ವಿಕ್ರಮ್ ಗೆ ಯಾವುದೇ ಹಾನಿಯಾಗಿಲ್ಲ..!

SPONSORED CONTENT

LEAVE A REPLY

Please enter your comment!
Please enter your name here