ನಾಡಿನಾದ್ಯಂತ ಆಯುಧ ಪೂಜೆ ಸಂಬ್ರಮ: ಮೈಸೂರಲ್ಲಿ ಕಳೆಗಟ್ಟಿದ ಗತ ವೈಭವ

0
31
ayudha-pooja-celebrating-across-state

ನಾಡಿನಾದ್ಯಂತ ಇಂದು ಆಯುಧ ಪೂಜೆ ಹಾಗೂ ಸರಸ್ವತಿ ಪೂಜೆ ವಿಜೃಂಭಣೆಯಿಂದ ನೆರವೆರಿಸಲಾಗುತ್ತಿದೆ. ನಾಡಿನಾದ್ಯಂತ ವಾಹನ, ಆಯುಧ, ಯಂತ್ರಗಳು ಮತ್ತು ರೈತರ ಕೆಲಸದ ಸಲಕರಣೆಗಳನ್ನು ಇಟ್ಟು ಅವುಗಳಿಗೆ ಪೂಜೆ ಸಲ್ಲಿಸುವುದು ಸಂಪ್ರದಾಯ.

ದಸರಾ ಎಂದರೆ ತಕ್ಷಣ ನೆನಪಾಗುವುದು ಮೈಸೂರು, ಇಂದು ಯಧುವೀರ್ ಒಡೆಯರ್ ಅವರು ತಮ್ಮ ಪಟ್ಟದ ಆನೆ, ಕುದುರೆ, ಹಸುಗಳಿಗೆ ಪೂಜೆಯನ್ನು ಸಲ್ಲಿಸಿದರು. ಅಲ್ಲದೇ ನಡೆದುಬಂದ ಸಂಪ್ರದಾಯದಂತೆ ಆಯುಧಗಳಿಗೆ ಪೂಜೆಯನ್ನು ಮಾಡಿದರು. ಈ ಕಾರ್ಯಕ್ರಮದಲ್ಲಿ ಒಡೆಯರ್ ಪತ್ನಿ ತಿಷಿಕಾ ದೇವಿ ಮೇಲಿನ ಕಲ್ಯಾಣ ಮಂಟಪದಲ್ಲಿ ಕುಳಿತು ವೀಕ್ಷಣೆ ಮಾಡಿದರು. ಯಧುವೀರ್ ಒಡೆಯರ್ ಜೊತೆಯಲ್ಲಿ ಮಗ ಆದ್ಯವೀರ್ ಅಜ್ಜಿಯೊಂದಿಗೆ ಬಾಗಿಯಾಗಿದ್ದು ವಿಶೇಷವಾಗಿತ್ತು.

ayudha-pooja-celebrating-across-state
Image Credit: google.com

ಈ ಆಯುಧ ಪೂಜೆಗೆ ವಿಶೇಷ ಪೌರಾಣಿಕ ಮಹತ್ವವಿದೆ. ದ್ವಾಪರಯುಗದಲ್ಲಿ ಪಾಂಡವರು ತಮ್ಮ ಹದಿನಾಲ್ಕು ವರ್ಷಗಳ ವನವಾಸ ಮತ್ತು ಒಂದು ವರ್ಷದ ಅಜ್ಞಾತವಾಸವನ್ನು ಪೂರ್ಣಗೊಳಿಸಿ, ಬನ್ನಿ ಮರದಲ್ಲಿ ಅಡಗಿಸಿಟ್ಟಿದ್ದ ಆಯುಧಗಳನ್ನು ಹೊರ ತೆಗೆದು ಶತ್ರುಗಳ ವಿರುದ್ಧ ಹೋರಾಡಿ ಜಯಸಾಧಿಸಿದರು. ಅಂದಿನ ಈ ವಿಜಯದ ದಿವಸವನ್ನೇ ವಿಜಯದಶಮಿ ಎಂದು ಸಂಬ್ರಮದಿಂದ ಆಚರಿಸಲಾಗುತ್ತದೆ.

ಇದನ್ನೂ ಓದಿರಿ: ಮೈಸೂರು ದಸರಾ: ಮುಖ್ಯಮಂತ್ರಿಗಳಿಂದ ನಂದಿ ಧ್ವಜಕ್ಕೆ ಪುಸ್ಪಾರ್ಚನೆ

LEAVE A REPLY

Please enter your comment!
Please enter your name here