ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ

0
140

ರಾಜಸ್ಥಾನ, ಮಧ್ಯಪ್ರದೇಶ, ಚತ್ತೀಸಗಡ, ಮಿಜೋರಾಂ ಮತ್ತು  ತೆಲಂಗಾಣಗಳಲ್ಲಿ  ನಡೆದ ಚುನಾವಣಾ ಫಲಿತಾಂಶವು ಇಂದು ಹೇರಬಿದ್ದಿದ್ದು, ಪ್ರಮುಖವಾಗಿ ಬಿಜೆಪಿಗೆ ಹಿನ್ನಡೆಯಾಗಿರುವುದು ಕಂಡು ಬರುತ್ತದೆ. 2019 ರ ಲೋಖಸಭಾ ಚುನಾವಣೆಗೆ ಇದು ದಿಕ್ಸೂಚಿ ಎಂಬಂತೆ ಬಿಂಬಿತವಾಗಿತ್ತು.

ಮೋದಿಯವರು  ಕಾಂಗ್ರೆಸ್ ಮುಕ್ತ ಭಾರತದ ಕನಸನ್ನು ಕಂಡಿದ್ದರು. ಆದರೆ ಈ  ಐದು ರಾಜ್ಯಗಳ ಫಲಿತಾಂಶವನ್ನು ನೋಡಿದರೆ ಹಿನ್ನದೆಯಾದಂತೆ ಕಾಣುತ್ತಿದೆ. ಮೋದಿಯವರ ವರ್ಚಸ್ಸಿನ ಎದುರು ಕಾಂಗ್ರೆಸ್ ಮೈ ಕೊಡವಿ ನಿಂತಂತೆ ಕಾಣುತ್ತಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಸ್ಪರ್ಧಾದಾಯಕ ಕಣವಾಗಿ ಪರಿಣಮಿಸಿತ್ತು.  230 ಕ್ಷೇತ್ರಗಳ ವಿಧಾನಸಭೆಯಲ್ಲಿ  ಕಾಂಗ್ರೆಸ್ 114 ಹಾಗೂ ಬಿಜೆಪಿ 108  ಬಿಎಸ್ಪಿ ಸೇರಿದಂತೆ ಇತರೆ 8 ಸ್ಥಾನಗಳಲ್ಲಿ ಗೆಲುವನ್ನು ಸಾಧಿಸಿದ್ದಾರೆ. ಇಲ್ಲಿ ಯಾವುದೇ ಪಕ್ಷಗಳು ಮ್ಯಾಜಿಕ್ ನಂಬರನ್ನು ಪದೆಯದಿರುವುದರಿಂದ ಸರಕಾರ ರಚನೆಗೆ ಕಸರತ್ತು ಮಾಡುವುದು ಅವಶ್ಯವಾಗಿದೆ.

ಇನ್ನು ರಾಜಸ್ಥಾನದಲ್ಲಿ 200 ಸ್ಥಾನಗಳ ಪೈಕಿ 199 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 101, ಬಿಜೆಪಿ 73,ಇತರೆ 19 ಮತ್ತು ಬಿಎಸ್ಪಿ 6 ಸ್ಥಾನಗಳನ್ನು ಗಳಿಸಿಕೊಂಡಿವೆ. 2013 ರಲ್ಲಿ 21 ಸ್ಥಾನವನ್ನು ಗಳಿಸಿಕೊಂಡಿದ್ದ ಕಾಂಗ್ರೆಸ್ ಈಗ 80 ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಪ್ರಭಲ ಆಡಳಿತ ವಿರೋದಿ ಅಲೆಯಿಂದಾಗಿ 90 ಸ್ಥಾನಗಳನ್ನು ಕಳೆದುಕೊಂಡು ಎರಡನೆಯ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ELECTION RESULT 2019 - ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ

ಛತ್ತಿಸಗಡದಲ್ಲಿ   90 ಕ್ಷೇತ್ರಗಳ ಪೈಕಿ 68 ನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಗಳಿಸಿದ್ದು, ಅಧಿಕಾರವನ್ನು ನಡೆಸಲಿದೆ. ಇನ್ನುಳಿದಂತೆ ಬಿಜೆಪಿ 15 ಮತ್ತು ಬಿಎಸ್ ಪಿ 7 ಸ್ಥಾನಗಳನ್ನು ಗಳಿಸಿಕೊಂಡಿವೆ.

ತೆಲಂಗಾಣದಲ್ಲಿ  ಟಿ ಅರ್ ಎಸ್ ಹಿಂದಿನ ಬಾರಿಗಿಂತಲೂ ಹೆಚ್ಚಿನ ಸ್ಥಾನಗಳನ್ನುಗಳಿಸುವ ಮೂಲಕ ಅಧಿಕಾರ ಹಿಡಿಯುವ ಪಕ್ಷವಾಗಿ ಹೊರಹೊಮ್ಮಿದೆ. 60 ಸ್ಥಾನಗಳ ಬಹುಮತದ ಅವಶ್ಯಕತೆಯಿರುವ ವಿಧಾನಸಭೆಗೆ 88 ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ಸಾಧನೆಯನ್ನು ಮಾಡಿದೆ. ಇಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳನ್ನು ಪಡೆಯುವ ಭರವಸೆ ಮೂಡಿಸಿದ್ದರು ಒಂದು ಸ್ಥಾನವನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಇಲ್ಲಿ ಕಾಂಗ್ರೆಸ್ 21 ಸ್ಥಾನಗಳನ್ನು ಗೆಲ್ಲುವ ಮೂಲಕ ಎರಡನೆಯ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

ಇದನ್ನೂ ಓದಿರಿ : ಹುತಾತ್ಮ ವೀರ ಯೋಧರ ಕುಟುಂಬಗಳಿಗೆ ನೀವೂ ಸಹಾಯ ಮಾಡಿ..!

 

ಇನ್ನು ಮಿಜೋರಾಂನ ವಿಧಾನಸಭಾ ಕ್ಷೇತ್ರದಲ್ಲಿ 40 ಸ್ಥಾನಗಳು ಇದ್ದು, ಅವುಗಳಲ್ಲಿ ಎಂ ಎನ್ ಎಫ್ ಅತೀ ಹೆಚ್ಚು ಅಂದರೆ 26 ಸ್ಥಾನಗಳನ್ನು ಪಡೆದುಕೊಂಡರೆ, ಕಾಂಗ್ರೆಸ್ 5, ಬಿಜೆಪಿ 1 ಮತ್ತು ಇತರೆ 8 ಸ್ಥಾನಗಳನ್ನು ಪಡೆದುಕೊಂಡಿವೆ. ಮಿಜೋರಾಂ ವಿಧಾನಸಭೆಯಲ್ಲಿ ಅಧಿಕಾರ ನಡೆಸಲು 21 ಸ್ಥಾನಗಳು ಅವಶ್ಯವಿದ್ದು, ಎಂ ಎನ್ ಎಫ್ ಸ್ಪಷ್ಟ ಬಹುಮತವನ್ನು ಗಳಿಸಿದೆ.

ಈ ಐದು ರಾಜ್ಯಗಳ ಫಲಿತಾಂಶವು ಬಿಜೆಪಿಗೆ ಸ್ವಲ್ಪಮಟ್ಟಿನ ಬೇಸರ ತಂದೊಡ್ಡಿದರೆ, ಕಾಂಗ್ರೆಸ್ ಮೋದಿ ಅಲೆಯ ವಿರುದ್ಧ ಚೇತರಿಸಿಕೊಳ್ಳುತ್ತಿರುವಂತೆ ಕಂಡು ಬರುತ್ತಿದೆ. ಅಲ್ಲದೇ ಈ ಫಲಿತಾಂಶವು ಲೋಖಸಭಾ ಚುನಾವಣೆಗೆ ಮಹಾ ಘಟಬಂಧನಗೆ ಮುನ್ನುಡಿಯನ್ನು ಹಾಕಿದಂತೆ ಕಂಡುಬರುತ್ತಿದೆ.

Image Copyright : google.com

 

 

LEAVE A REPLY

Please enter your comment!
Please enter your name here