ಏರ್ಸೆಲ್-ಮಾಕ್ಸಿಸ್ ಹಗರಣ: ಚಿದಂಬರಂ ವಿಚಾರಣೆಗೆ ಒಪ್ಪಿಸಲು ಮನವಿ

0
49


ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ನಾಯಕ  ಪಿ. ಚಿದಂಬರಂ ಅವರ ವಿರುದ್ಧ ಅಕ್ಟೋಬರ್ 25 ರಂದು ಚಾರ್ಜ್ ಶೀಟ್ ದಾಖಲಿಸಿರುವ  ಜಾರಿ ನಿರ್ದೇಶನಾಲಯ ಈಗ ಹೈಕೋರ್ಟ್ ಗೆ  ಅವರ ನಿರೀಕ್ಷಣಾ ಜಾಮೀನು ಕುರಿತಂತೆ ತೀವ್ರ ವಿರೋಧ ವ್ಯಕ್ತಪಡಿಸಿದೆ.

ಪಿ. ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಗುರುವಾರ ಸಿಬಿಐ ವಿಶೇಷ ನ್ಯಾಯಾಧೀಶರು ಕೈಗೆತ್ತಿಕೊಳ್ಳಲಿದ್ದು ಈ ಕುರಿತು ನಿರ್ದೇಶನಾಲಯ ಆಕ್ಷೇಪಣೆ ವ್ಯಕ್ತಪಡಿಸಿದೆ. ಚಿದಂಬರಂ ಅವರು ಏರ್ಸೆಲ್ – ಮಾಕ್ಸಿಸ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಸರಿಯಾಗಿ ಸಹಕರಿಸುತ್ತಿಲ್ಲ. ಅವರು   
ಕಾಂಗ್ರೆಸ್ ನ  ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಈ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದು, ಅವರನ್ನು ವಿಚಾರಣೆ ನಡೆಸುವುದು ಅವಶ್ಯವಾಗಿದೆ ಎಂದು ಹೇಳಿದೆ. 

ಇದನ್ನೂ ಓದಿರಿ : ಟೋಕಿಯೋದಿಂದ ಬಂದು ಇಟಲಿ ಪ್ರಧಾನಿ ಬರಮಾಡಿಕೊಂಡ ಮೋದಿ …!

ನಿರೀಕ್ಷಣಾ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಅವರನ್ನು ತಮ್ಮ ವಶಕ್ಕೆ ನೀಡಬೇಕೆಂದು ಮನವಿ ಮಾಡಿಕೊಂಡಿದೆ. ವಿಚಾರಣೆ ನಾಳೆ ಆರಂಭವಾಗಲಿದ್ದು ತೀವ್ರ ಕುತೂಹಲ ಕೆರಳಿಸಿದೆ. 

LEAVE A REPLY

Please enter your comment!
Please enter your name here