ಬಾಕ್ಸಿಂಗ್ ಡೇ ಟೆಸ್ಟ್: ಏಳರ ಪೋರ ಆಸೀಸ್ ಗೆ ಸಹನಾಯಕ..!

0
66

ಮೆಲ್ಬರ್ನ್: ಡಿಸೆಂಬರ್ 26 ರಂದು ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಭಾರತದ ನಡುವಿನ 3 ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಸಹ ನಾಯಕನಾಗಿ 7 ವರ್ಷದ ಹುಡುಗ ಫೋರ್ ಆರ್ಚೀ ಷಿಲ್ಲರ್ ಆಯ್ಕೆಯಾಗಿದ್ದಾನೆ.

ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಸಮಬಲ ಸಾಧಿಸಿರುವ ಎರಡೂ ತಂಡಗಳಿಗೆ ಮೂರನೆ ಪಂದ್ಯ ಅತಿಮುಖ್ಯವಾಗಿದ್ದು, ಪ್ರಭಲ ಪೈಪೋಟಿ ನಿರೀಕ್ಷಿಸಲಾಗಿದೆ. ಈ ಏಳರ ಪೋರ ಕ್ರಿಕೆಟ್ ಪ್ರೀಯನಾಗಿದ್ದು, ಲೆಗ್ ಸ್ಪಿನ್ ಬೌಲರ್ ಆಗಿದ್ದಾನೆ. ಆತನ್ನನ್ನು ಆಸೀಸ್ ತಂಡದ ಸಹ ನಾಯಕನಾಗಿ ಆಯ್ಕೆಮಾಡಲಾಗಿದ್ದು, 15 ಸದಸ್ಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾನೆ. ಆತನನ್ನು ಆಯ್ಕೆಮಾಡಲು ವಿಶೇಷ ಕಾರಣವಿದ್ದು..ತಿಳಿಯಲು ಮುಂದೆ ಓದಿ….

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಆಸೀಸ್ ತಂಡದ ನಾಯಕನಾಗಿ ಕ್ರಿಕೆಟ್ ಆಡುವ ಆಸೆಯನ್ನು ಇಟ್ಟುಕೊಂಡಿದ್ದಾನೆ. ಇವನು ಕೇವಲ ಮೂರು ತಿಂಗಳ ಮಗುವಿದ್ದಾಗಲೇ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ. ನಂತರ 9 ನೇ ತಿಂಗಳಿನಲ್ಲಿರುವಾಗ ಮತ್ತೊಮ್ಮೆ ಮತ್ತು ಕಳೆದವರ್ಷ ಮತ್ತೆ ಓಪನ್ ಹಾರ್ಟ್ ಸರ್ಜರಿ ಮಾಡಲಾಗಿದೆ. ಈಗ ಮತ್ತೆ ಸರ್ಜರಿ ಮಾಡಬೇಕಾಗಿದ್ದು, ಮಗುವನ್ನು ಕಳೆದುಕೊಳ್ಳುವ ಭೀತಿಯಲ್ಲಿರುವ ಪೋಷಕರು ಆತನ ಆಸೆಯನ್ನು ನೆರವೇರಿಸುವಂತೆ ಆಸೀಸ್ ಕ್ರಿಕೆಟ್ ತಂಡದಲ್ಲಿ ಕೇಳಿಕೊಂಡಾಗ ಈ ಅವಕಾಶವನ್ನು ಕಲ್ಪಿಸಲಾಗಿದೆ.

ಫೋರ್ ಆರ್ಚೀ ಷಿಲ್ಲರ್ ಗೆ ವಿರಾಟ್ ಕೊಹ್ಲಿಯ ವಿಕೆಟ್ ಪಡೆಯುವ ಆಸೆ ತುಂಬಾ ಇದ್ದು, ಆ ವಿಶ್ವಾಸವನ್ನು ಹೊಂದಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ವಿರಾಟ್ ಕೊಹ್ಲಿಯ ವಿಕೆಟ್ ಪಡೆಯಲು ತಯಾರಿಯನ್ನು ನಡೆಸಿದ್ದಾನೆ.

Image Copyright: google.com


LEAVE A REPLY

Please enter your comment!
Please enter your name here