ದೇಹದ ತೂಕವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ..?

0
118

ಕೆಲವರು ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸಿದರೆ ಮತ್ತೆ ಕೆಲವರು ಇರುವ ತೂಕವನ್ನು ಇಳಿಸುವುದು ಹೇಗೆ ಎಂಬ ಚಿಂತೆಯಲ್ಲಿ ಇರುತ್ತಾರೆ. ಇಲ್ಲಿ ಮುಖ್ಯವಾಗಿ ದಪ್ಪ ಅಥವಾ ಸಣ್ಣಗಾಗುವುದು ಮುಖ್ಯವಲ್ಲ ಪ್ರತಿಯೊಬ್ಬರೂ ಆರೋಗ್ಯವಾಗಿರಬೇಕೆಂದರೆ ಸರಿಯಾದ ತೂಕವನ್ನು ಹೊಂದಿರುವುದು ಅವಶ್ಯವಾಗಿದೆ.

ದೇಹದ ತೂಕ ಹೆಚ್ಚಿರುವವರಿಗೆ ಹೇಗೆ ನಾನಾತೊಂದರೆಗಳು ಉಂಟಾಗುವವೋ ಹಾಗೆಯೇ ತೂಕ ಕಡಿಮೆಯಿರುವವರಲ್ಲಿ ಆಯಾಸ, ನಿಶ್ಯಕ್ತಿ, ನಿರುತ್ಸಾಹ ಮುಂತಾದ ತೊಂದರೆಗಳು ಕಂಡುಬರುತ್ತವೆ. ತೂಕವನ್ನು ಹೆಚ್ಚಿಸಿಕೊಳ್ಳುವ ಬರದಲ್ಲಿ ಇಂದಿನ ಯುವಜನಾಂಗ ಅನೇಕ ತೊಂದರೆಗಳಿಗೆ ಸಿಲುಕಿಕೊಳ್ಳುತ್ತಿದ್ದಾರೆ. ನೈಸರ್ಗಿಕ ವಿಧಾನಗಳಿಂದದಲೂ ಸರಿಯಾದ ತೂಕವನ್ನು ಪಡೆಯಬಹುದಾಗಿದ್ದು, ಅಂತಹ ಆಹಾರ ಕ್ರಮಗಳ ಕುರಿತಾಗಿ ಇಲ್ಲಿ ಚರ್ಚಿಸಲಾಗಿದೆ…

ತೂಕವನ್ನು ಹೆಚ್ಚಿಸಿಕೊಳ್ಳಲು ಅನುಸರಿಸಬೇಕಾದ ಕೆಲವು ನೈಸರ್ಗಿಕ ವಿಧಾನಗಳನ್ನು ನೋಡೋಣ…

ಪ್ಯಾಟ್ ಹೊಂದಿರುವ ಹಾಲು

whole fat milk healthier - ದೇಹದ ತೂಕವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ..?

ತೂಕವನ್ನು ಹೆಚ್ಚಿಸಿಕೊಳ್ಳಲು ಹಾಲು ಒಂದು ಉತ್ತಮ ನೈಸರ್ಗಿಕ ಪದಾರ್ಥವಾಗಿದೆ. ಸಂಪೂರ್ಣ ಪ್ಯಾಟನ್ನು ಹೊಂದಿರುವ ಹಾಲನ್ನು ತೆಗೆದುಕೊಳ್ಳುವುದರಿಂದ ಹೆಚ್ಚಿನ ಜೀವಸತ್ವಗಳು ಮತ್ತು ಪೋಷಕಾಂಶಗಳು ದೊರೆಯುತ್ತವೆ. ಹಾಲಿನಲ್ಲಿ ವಿಟಮಿನ್ ಡಿ ಮತ್ತು ಎ ಹೇರಳವಾಗಿ ತುಂಬಿಕೊಂಡಿವೆ. ನೀವು ಹಾಲನ್ನು ಹೇಗೆ ಬಳಸುತ್ತಿರೋ ಹಾಗೆ ನಿಮ್ಮ ಆರೋಗ್ಯ ಉತ್ತಮಗೊಳ್ಳುತ್ತವೆ.

ಇದನ್ನೂ ಓದಿರಿ : ದೇಹದ ಉಷ್ಣತೆಯನ್ನು ತಕ್ಷಣವೇ ಕಡಿಮೆ ಮಾಡಲು ಇಲ್ಲಿದೆ ಸುಲಭ ಉಪಾಯಗಳು..!

ಬೆಣ್ಣೆ ಮತ್ತು ತುಪ್ಪವನ್ನು ಹೆಚ್ಚಿಗೆ ಬಳಸಿ

ತುಪ್ಪ ಮತ್ತು ಬೆಣ್ಣೆ ತೂಕವನ್ನು ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಉತ್ತಮ ಆಹಾರವಾಗಿದೆ. ಪ್ರತಿದಿನ ಹಾಲನ್ನು ಕುಡಿದು ಬೇಸರವಾದಾಗ ಬೆಳಗಿನ ತಿಂಡಿಗೆ ಬ್ರೆಡ್, ದೊಸೆಗಳಿಗೆ ಬೆಣ್ಣೆ ಮತ್ತು ತುಪ್ಪವನ್ನು ಬಳಸುವುದು ಒಂದು ಬೇರೆಯದೇ ರುಚಿಯನ್ನು ನೀಡುತ್ತದೆ. ಬೆಣ್ಣೆ ಮತ್ತು ತುಪ್ಪವು ಸ್ಯಾಚುರೆಟೆಡ್ ಕೊಬ್ಬಿನಂಶವನ್ನು ಹೊಂದಿದೆ. ಈ
ಸ್ಯಾಚುರೆಟೆಡ್ ಕೊಬ್ಬು ದೇಹದ ಆರೋಗ್ಯಕ್ಕೆ ಉತ್ತಮವಾಗಿದ್ದು, ದೇಹದ ತೂಕವನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ.

ಇದನ್ನೂ ಓದಿರಿ: ನಿಂಬೆ ಹುಲ್ಲಿನ ಕಷಾಯದ ಆರೋಗ್ಯಕಾರಿ ಗುಣಗಳನ್ನು ತಿಳಿದರೆ ನೀವು ಕುಡಿಯದೇ ಬಿಡಲಾರಿರಿ.

ಹೆಚ್ಚೆಚ್ಚು ಹಣ್ಣುಗಳನ್ನು ಸೇವಿಸಿ

ಹಣ್ಣುಗಳು ಉತ್ತಮ ಶಕ್ತಿಯನ್ನು ಮತ್ತು ಪೋಷಕಾಂಶಗಳನ್ನು ನಮಗೆ ಒದಗಿಸುತ್ತವೆ. ಇವು ನೈಸರ್ಗಿಕ ಸಕ್ಕರೆಯ ಅಂಶವನ್ನು ಹೊಂದಿರುತ್ತವೆ. ಇದರಿಂದ ಬೇಗನೆ ದೇಹಕ್ಕೆ ಶಕ್ತಿಯು ಲಭ್ಯವಾಗುತ್ತವೆ. ಇವುಗಳನ್ನು ಸಿಹಿಯಾದ ಭಕ್ಷ್ಯಗಳೊಂದಿಗೆ ಸೇರಿಸಿಕೊಂಡು ತಿನ್ನಬಹುದಾಗಿದ್ದು, ಹೆಚ್ಚಿನ ಶಕ್ತಿಯನ್ನು ನೀಡುತ್ತವೆ. ಇದರಿಂದಾಗಿ ದೇಹದ ತೂಕವು ಹೆಚ್ಚಾಗುತ್ತದೆ.

ಬೆಣ್ಣೆಹಣ್ಣು ಸೇವಿಸಿ

Avocado 840x473 - ದೇಹದ ತೂಕವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ..?

ಬೆಣ್ಣೆಹಣ್ಣು ನಿಮ್ಮ ದೇಹಕ್ಕೆ ಉತ್ತಮ ಶಕ್ತಿ ಹಾಗೂ ತೂಕವನ್ನು ತುಂಬಾ ಸುಲಭವಾಗಿ ನೀಡಲು ಸಹಕರಿಸುತ್ತದೆ. ಇದು ವಿಟಮಿನ್ ಇ, ಪೋಲಿಕ್ ಆಸಿಡ್ ಮತ್ತು ಪೊಟಾಷಿಯಂನಂತಹ ಉತ್ತಮ ಪೋಷಕಾಂಶಗಳ ಮೂಲವಾಗಿದೆ. ಈ ಹಣ್ಣನ್ನು ಸಲಾಡ್ ಅಥವಾ ಮಿಲ್ಕ್ ಶೇಕ್ ಮಾಡಿಕೊಂಡು ದಿನಾಲು ಸೇವಿಸುತ್ತ ಬಂದರೆ ಬೇಗನೆ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.

ಬಾಳೆಹಣ್ಣು ಸೇವಿಸಿ

ಬಾಳೆಹಣ್ಣು ದೇಹದ ತೂಕವನ್ನು ಹೆಚ್ಚಿಸಲು ತುಂಬಾ ಸಹಕಾರಿಯಾದ ಹಣ್ಣುಗಳಲ್ಲಿ ಒಂದಾಗಿದೆ. ಇದನ್ನು ದಿನಕ್ಕೆ ಎರಡರಿಂದ ಮೂರೂ ಹಣ್ಣುಗಳನ್ನು ಸೇವಿಸುವುದರಿಂದ ಅಗತ್ಯವಿರುವ ಪೋಷಕಾಂಶಗಳು ಸುಲಭವಾಗಿ ದೊರೆಯುತ್ತವೆ.

ಆಲುಗಡ್ಡೆಯನ್ನು ಹೆಚ್ಚು ಉಪಯೋಗಿಸಿ

potatos - ದೇಹದ ತೂಕವನ್ನು ನೈಸರ್ಗಿಕವಾಗಿ ಹೆಚ್ಚಿಸಿಕೊಳ್ಳುವುದು ಹೇಗೆ..?

ಆಲುಗಡ್ಡೆಯು ಕಾರ್ಬೋಹೈಡ್ರೆಟ್ ಮತ್ತು ಪ್ರೋಟಿನ್ ನ ಸಮೃದ್ಧ ಮೂಲವಾಗಿದೆ. ತೂಕವನ್ನು ಹೆಚ್ಚಿಸುವಲ್ಲಿ ಆಲುಗಡ್ಡೆ ತುಂಬಾ ಸಹಕಾರಿಯಾಗಿದೆ. ಆಲುಗಡ್ಡೆಯು ಸಿಪ್ಪೆಯಲ್ಲಿ ಹೆಚ್ಚಿನ ಜೀವಸತ್ವಗಳು, ಪ್ರೋಟಿನ್ ಮತ್ತು ಪೋಷಕಾಂಶಗಳನ್ನು ಹೊಂದಿದೆ. ಆದ್ದರಿಂದ ಸೇಪ್ಪೆಯ ಜೊತೆಗೆ ಇದರ ಸೇವನೆ ನಮಗೆ ಹೆಚ್ಚಿನ ಸಹಾಯವನ್ನು ಮಾಡುತ್ತದೆ.

ಒಣ ಹಣ್ಣುಗಳು ಮತ್ತು ಬೀಜಗಳನ್ನು ಸೇವಿಸಿ

ಒಣ ಹಣ್ಣುಗಳು ಮತ್ತು ಬೀಜಗಳು ಸಹ ದೇಹದ ತೂಕ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ದ್ರಾಕ್ಷಿ, ಕರ್ಜುರಗಳಂತಹ ಒಣಹಣ್ಣುಗಳು ಮತ್ತು ಶೇಂಗಾ, ಬಾದಾಮಿ, ಗೋಡಂಬಿಯಂತಹ ಬೀಜಗಳು ದೇಹದಲ್ಲಿ ಕೊಬ್ಬಿನಂಶ ಮತ್ತು ಪೋಷಕಾಂಶಗಳನ್ನು ಹೆಚ್ಚ್ಗಿಸುತ್ತವೆ. ಅಲ್ಲದೇ ಇವುಗಳನ್ನು ಸುಲಭವಾಗಿ ಎಲ್ಲಿಗಾದರೂ ಕೊಂಡೊಯ್ದು ಸೇವಿಸಬಹುದು. ಇದರಿಂದಾಗಿ ಹಸಿವೆಯಾದ ಸಂದರ್ಭದಲ್ಲಿ ಹೆಚ್ಚಿನ ಶಕ್ತಿ ದೊರೆತಂತಾಗುತ್ತದೆ.

ಇದನ್ನೂ ಓದಿರಿ : ಸೂರ್ಯನಮಸ್ಕಾರದ ಪ್ರಯೋಜನಗಳು

ಇಂದಿನ ದಿನದಲ್ಲಿ ವೇಗವಾಗಿ ತೂಕವನ್ನು ಹೆಚ್ಚಿಸುವ ಬರದಲ್ಲಿ ಸಿಹಿ ಪಾನೀಯ ಮತ್ತು ಕರಿದತಿಂಡಿಗಳನ್ನು ಸೇವಿಸಿ ಬಹು ಬೇಗನೆ ತೂಕ ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಇದರಿಂದ ಆರೋಗ್ಯದ ಮೇಲೆ ತುಂಬಾ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಹಾಗಾಗಿ ತೂಕ ಹೆಚ್ಚಿಸಿಕೊಳ್ಳಲು ಬಯಸಿದವರಿಗೆ ತುಂಬಾ ಆರೋಗ್ಯಕರವಾದ ವಿಧಾನಗಳನ್ನು ಇಲ್ಲಿ ಚರ್ಚಿಸಲಾಗಿದೆ. ಇವುಗಳು ನಿಮಗೆ ಸಹಾಯವನ್ನು ಮಾಡುತ್ತವೆ.. ನಮ್ಮ ಸಲಹೆ ಇಷ್ಟವಾದರೆ ನಮ್ಮ ಜಾಲತಾಣದ ನೋಟಿಫಿಕೇಶನ್ ಆನ್ ಮಾಡಿ… ಮತ್ತು ಇದರಿಂದ ನಾವು ಪ್ರಕಟಿಸಿದ ಸುದ್ದಿಗಳ ಲಿಂಕನ್ನು ತಕ್ಷಣ ಪಡೆಯುತ್ತೀರಿ…

Image Copyright : google.com

LEAVE A REPLY

Please enter your comment!
Please enter your name here